ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು: ಸಂವಿಧಾನ ಸಂರಕ್ಷಣಾ ಜಾಗೃತಿ ಜಾಥಾ

ಪುತ್ತೂರು: ಸಂವಿಧಾನ ಸಂರಕ್ಷಣಾ ಜಾಗೃತಿ ಜಾಥಾ



ಪುತ್ತೂರು: ಸಂವಿಧಾನ ನಾಶವಾಗಲು, ಒಂದೊಂದಾಗಿ ತೂತು ಬಿಡಲು ಬಿಟ್ಟರೆ ಭವ್ಯ ಭಾರತ ಏನಾದೀತು ಎಂಬ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ ಎಂದು ಕರ್ನಾಟಕ ಋಣಮುಕ್ತ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ವಕೀಲ ಬಿ.ಎಂ.ಭಟ್ ಅವರು ಹೇಳಿದರು.


ಪುತ್ತೂರು ನಗರದ ಕೆಎಸ್‌ಆರ್‌ಟಿಸಿ ಸಮೀಪದ ಗಾಂಧೀ ಕಟ್ಟೆಯ ಬಳಿ ನಡೆದ `ಸಂವಿಧಾನ ಸಂರಕ್ಷಣಾ ಜಾಗೃತಿ ಜಾಥಾ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ದುಡಿಯುವ ವರ್ಗಕ್ಕೆ ದುಡಿತಕ್ಕೆ ತಕ್ಕ ಪ್ರತಿಫಲ ನೀಡುವುದು ಕೂಡ ಸಾಮಾಜಿಕ ನ್ಯಾಯ ಚಿಂತನೆಯಲ್ಲಿ ಬರುತ್ತದೆ. ಸಾಮಾಜಿಕ ನ್ಯಾಯ ಮೊದಲು ಅನಂತರ ರಾಜಕೀಯ ನ್ಯಾಯ ಎಂದ ಅವರು ತುಳಿತಕ್ಕೊಳಗಾದವರು, ಶೋಚನೀಯ ಸ್ಥಿತಿಯಲ್ಲಿರುವವರು ಮೇಲೆ ಬರಬೇಕಾದರೆ ಸಾಮಾಜಿಕ ಸಮಾನತೆ ಇರಬೇಕು ಎಂಬ ಸಾಮಾಜಿಕ ಬದ್ಧತೆಯನ್ನು ಸಂವಿಧಾನ ನೀಡಿದೆ. ಇಂತಹ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಗುವ ತನಕವೂ ಮೀಸಲಾತಿ ಬೇಕಾಗಿದೆ ಎಂದು ಅವರು ಹೇಳಿದರು.


ಸಿಪಿಐಎಂ ಮುಖಂಡರಾದ ಡೊಂಬಯ್ಯ ಗೌಡ, ನೆಬಿಸಾ ಮತ್ತಿತರರು ಇದ್ದರು. ದಲಿತ ಹಕ್ಕು ರಕ್ಷಣಾ ಸಮಿತಿಯ ಮುಖಂಡೆ ಈಶ್ವರಿ ಸ್ವಾಗತಿಸಿದರು. ಕಾರ್ಮಿಕ ಸಂಘಟನೆಯ ಮುಖಂಡ ಎಲ್. ಮಂಜುನಾಥ್ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post