ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಾಂಧಿ ಪ್ರತಿಮೆಗೆ ಆಳವಡಿಸಿದ್ದ ಕಬ್ಬಿಣದ ಊರುಗೋಲು ಕಳವು

ಗಾಂಧಿ ಪ್ರತಿಮೆಗೆ ಆಳವಡಿಸಿದ್ದ ಕಬ್ಬಿಣದ ಊರುಗೋಲು ಕಳವು

 


ಗದಗ: ಬೆಟಗೇರಿ ಅವಳಿ ನಗರದ ಗಾಂಧಿ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆಗೆ ಅಳವಡಿಸಿದ್ದ ಕಬ್ಬಿಣದ ಊರುಗೋಲನ್ನು ಕಿಡಿಗೇಡಿಗಳು ಕಳವು ಮಾಡಿರುವ ಘಟನೆಯೊಂದು ಶುಕ್ರವಾರ ರಾತ್ರಿ ನಡೆದಿದೆ.


ಶನಿವಾರ ಸಂಜೆವರೆಗೂ ಕಳವಾದ ವಿಚಾರ ಯಾರಿಗೂ ತಿಳಿದು ಬಂದಿರಲಿಲ್ಲ.


ಶನಿವಾರ ಸಂಜೆ ವೃತ್ತದಲ್ಲಿ ನಿಂತಿದ್ದ ಜನರು ಗಾಂಧೀಜಿ ಕೈಯಲ್ಲಿದ್ದ ಕೋಲು ಕಾಣೆಯಾಗಿರುವುದನ್ನು ಗಮನಿಸಿ, ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವೃತ್ತದಲ್ಲಿ ಅಳವಡಿಸಿರುವ ಸಿಸಿಟಿವಿ ಫೂಟೇಜ್‌ ಅನ್ನು ಪೊಲೀಸರು ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ಶನಿವಾರ ರಾತ್ರಿಯೇ ಗಾಂಧೀಜಿ ಪ್ರತಿಮೆಗೆ ಮತ್ತೊಂದು ಊರುಗೋಲು ಅಳವಡಿಸುವ ಮೂಲಕ ನಗರಸಭೆ ಅಧಿಕಾರಿಗಳು ಮುಂದಾದರು.

0 تعليقات

إرسال تعليق

Post a Comment (0)

أحدث أقدم