ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರ್ತವ್ಯದಲ್ಲಿದ್ದ ಕಂಡಕ್ಟರ್ ಕುಸಿದು ಬಿದ್ದು ಸಾವು

ಕರ್ತವ್ಯದಲ್ಲಿದ್ದ ಕಂಡಕ್ಟರ್ ಕುಸಿದು ಬಿದ್ದು ಸಾವು

 


ಕರ್ನೂಲ್ : ತುಮಕೂರಿನಿಂದ ಮಂತ್ರಾಲಯಕ್ಕೆ ಸಂಚಾರಿಸುತ್ತಿದ್ದ ಬಸ್‌ನಲ್ಲಿ ಕರ್ತವ್ಯದಲ್ಲಿದ್ದ ಕಂಡಕ್ಟರ್‌ ಬಸ್‌ನಲ್ಲೇ ಸಾವನ್ನಪ್ಪಿದ ಘಟನೆಯೊಂದು ಕರ್ನೂಲ್​ನ ಢಾಣಾಪುರ ನಿಲ್ದಾಣದಲ್ಲಿ ನಡೆದಿದೆ. 


ತುಮಕೂರು ಡಿಪೋ-2ರಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ತಿಪ್ಪೇಸ್ವಾಮಿಯವರು ಕರ್ನೂಲ್​ನ ಢಾಣಾಪುರ ನಿಲ್ದಾಣದಲ್ಲಿ ಬಸ್​​ ನಿಲ್ಲಿಸಿ ಪ್ರಯಾಣಕರನ್ನು ಹತ್ತಿಸಿಕೊಂಡು, ಬಸ್‌ ಒಳಗೆ ಹೋಗಿ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳುವ ವೇಳೇಯಲ್ಲಿ ಧೀಡಿರ್‌ ಕುಸಿದು ಬಿದಿದ್ದಾರೆ ಎನ್ನಲಾಗಿದೆ.


ಅದೇ ವೇಳೆ ಬಸ್‌ನಲ್ಲಿದವರು ನಿರ್ವಾಹಕ ತಿಪ್ಪೇಸ್ವಾಮಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆಗೆ ಮುಂದಾಗಿದ್ದರೂ, ಆದರೆ ಅವರು ಕೆಲ ಸಮಯದಲ್ಲಿ ಮೃತಪಟ್ಟರು ಎನ್ನಲಾಗಿದೆ.

0 تعليقات

إرسال تعليق

Post a Comment (0)

أحدث أقدم