ಬೆಂಗಳೂರು: ಬಿಎಂಟಿಸಿ ನೌಕರರ ಭವಿಷ್ಯ ನಿಧಿ ಸೇರಿದಂತೆ ಬಾಕಿ ಪಾವತಿಗೆ ₹200 ಕೋಟಿ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ.
'ಭವಿಷ್ಯನಿಧಿ, ಉಪಧನ, ನಿವೃತ್ತ ಮತ್ತು ಮರಣ ಹೊಂದಿದ ನೌಕರರ ಗಳಿಕೆ ರಜೆ ಮರುಪಾವತಿ, ಸಂಸ್ಥೆಗೆ ಸರಕು ಪೂರೈಕೆ ಮಾಡಿದವರ ಬಾಕಿ ಬಿಲ್‌ಗಳನ್ನು ಪಾವತಿಸಲು ಹಣ ಬಿಡುಗಡೆ ಮಾಡಲಾಗಿದೆ' ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಟ್ವಿಟರ್ ಮೂಲಕ ತಿಳಿಸಿದ್ದಾರೆ.
Post a Comment