ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭೂಮಾಪಕರ ನೇಮಕಾತಿಗೆ ಅರ್ಜಿ ಅಹ್ವಾನ, ಸಲ್ಲಿಕೆಗೆ ನಾಳೆಯೇ ಕಡೇ ದಿನ

ಭೂಮಾಪಕರ ನೇಮಕಾತಿಗೆ ಅರ್ಜಿ ಅಹ್ವಾನ, ಸಲ್ಲಿಕೆಗೆ ನಾಳೆಯೇ ಕಡೇ ದಿನ

 


ಬೆಂಗಳೂರು: ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಅನುಷ್ಠಾನಗೊಳಿಸಲು 3000 ಭೂಮಾಪಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲಾಗಿದೆ.

ಹುದ್ದೆಗಳಿಗೆ ಜನವರಿ 21 ರವರೆಗೆ ಅರ್ಜಿ ಹಾಕಲು ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಇಲಾಖೆಯು ಮತ್ತೊಮ್ಮೆ ಆನ್‌ಲೈನ್‌ ಅರ್ಜಿಗೆ ಅವಕಾಶ ನೀಡಿ ಪ್ರಕಟಣೆ ಹೊರಡಿಸಿದೆ.

ಅಭ್ಯರ್ಥಿಗಳು ಆನ್‌ಲೈನ್‌ನಲ್ಲೇ (rdservices.karnataka.gov.in ) ಫೆಬ್ರುವರಿ 11ರೊಳಗೆ ಅರ್ಜಿ ಸಲ್ಲಿಸಬೇಕು. ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂದು ಭೂಮಾಪಕ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ ತಿಳಿಸಿದೆ.

ವಿದ್ಯಾರ್ಹತೆ: ಪಿಯುಸಿ (ವಿಜ್ಞಾನ ನಿಕಾಯ)ಯಲ್ಲಿ ಗಣಿತದಲ್ಲಿ ಶೇ 60 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಬಿ.ಇ, ಅಥವಾ ಸರ್ವೇ ಟ್ರೇಡ್‌ನಲ್ಲಿ ಐಟಿಐ, ಡಿಪ್ಲೋಮಾ ಪಡೆದಿರಬೇಕು.

ವಯಸ್ಸು: ಕನಿಷ್ಠ 18, ಗರಿಷ್ಠ 65 ವರ್ಷಗಳು

ಅರ್ಜಿ ಶುಲ್ಕ: ಅಭ್ಯರ್ಥಿಗಳು ನಾಡ ಕಚೇರಿಗಳಲ್ಲಿನ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ ಅಥವಾ ಆಧಾರ್‌ ನೀಡಿ ₹ 1000 ಶುಲ್ಕ ಪಾವತಿಸಿ, ವಿಶಿಷ್ಟ ಅರ್ಜಿ ಸಂಖ್ಯೆ ಹೊಂದಿರುವ ಸ್ವೀಕೃತಿ ಪತ್ರ ಪಡೆಯಬೇಕು, ಈ ಸಂಖ್ಯೆ ಇಲ್ಲದಿದ್ದರೆ ಆನ್‌ಲೈನ್‌ ಅರ್ಜಿ ತೆರೆಯುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯ ವಿವರಗಳನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.

ಅರ್ಜಿ ಸಲ್ಲಿಸುವ ಕಡೆ ದಿನಾಂಕ: 11-02-2022

ವೆಬ್‌ಸೈಟ್‌: rdservices.karnataka.gov.in


0 Comments

Post a Comment

Post a Comment (0)

Previous Post Next Post