ಪುತ್ತೂರು: ಕೋವಿಡ್ ಪಾಸಿಟಿವ್‌ನಿಂದ ಮೃತಪಟ್ಟ ಪುತ್ತೂರು ಘಟಕದ ಗೃಹರಕ್ಷಕ ದಿ. ಜಗದೀಶ್ ಹೆಗ್ಡೆ ಅವರ ಮನೆಗೆ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ ಚೂಂತಾರು ಅವರು ಇಂದು (ಫೆ.13) ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೆ ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಮಂಜೂರಾದ 10,000 ರೂ.ಗಳ ಸಾಂತ್ವನದ ಮೊತ್ತದ ಚೆಕ್ ಅನ್ನು ಮೃತರ ಪತ್ನಿ ಹೊನ್ನಮ್ಮ ಅವರಿಗೆ ಹಸ್ತಾಂತರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪುತ್ತೂರು ಘಟಕದ ಗೃಹರಕ್ಷಕ ಜಗದೀಶ್ ಹೆಗ್ಡೆ ಇವರು ದಿನಾಂಕ 05-06-2021 ರಂದು ಕೋವಿಡ್ ಪಾಸಿಟಿವ್‍ನಿಂದ ಮೃತಪಟ್ಟಿದ್ದರು. ಜಿಲ್ಲಾ ಸಮಾದೇಷ್ಟರ ಶಿಫಾರಸ್ಸಿನ ಮೇರೆಗೆ ಇವರ ಕುಟುಂಬಕ್ಕೆ ಕೇಂದ್ರ ಕಛೇರಿಯಿಂದ ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನವನ್ನು ಮಂಜೂರು ಮಾಡಲಾಗಿತ್ತು.
ಈ ನಿಟ್ಟಿನಲ್ಲಿ ದಿನಾಂಕ 13-02-2022ನೇ ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ದಿ|| ಜಗದೀಶ್ ಹೆಗ್ಡೆ ಅವರ ಮನೆಗೆ ಭೇಟಿನೀಡಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ, ಮೃತರ ಪತ್ನಿ ಹೊನ್ನಮ್ಮ ಅವರಿಗೆ ರೂ 10,000/- ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಗೃಹರಕ್ಷಕರಾದ ದಿವಾಕರ್, ದುಷ್ಯಂತ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق