ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಿದಮಲೆ ಶ್ರೀ ಮಹಮ್ಮಾಯಿ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ

ಪಿದಮಲೆ ಶ್ರೀ ಮಹಮ್ಮಾಯಿ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ



ಮುಡಿಪು: ಬಂಟ್ವಾಳ ತಾಲೂಕು ಅಮ್ಮೆಂಬಳ ಮಾಗಣೆಯ ಕುರ್ನಾಡು ಗ್ರಾಮದ ಪಿದಮಲೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮಾನಭ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.2ರಂದು ಬುಧವಾರ ನೆರವೇರಿತು.

ಪೂರ್ವಾಹ್ನ ಗಣಪತಿ ಹೋಮದ ಬಳಿಕ 8.36ರ ನಂತರ ಒದಗಿದ ಕುಂಭ ಲಗ್ನದಲ್ಲಿ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠೆ, ದ್ರವ್ಯಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪಲ್ಲಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು.


ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಶಾಂತ ಕಾಜವ,  ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ ಆಳ್ವ , ಸಮಿತಿ ಗೌರವಾಧ್ಯಕ್ಷ ಕಿಶೋರ್ ಕುಮಾರ್ ನಾಗುರಿ, ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ನಾಯಕ್ ಕುರ್ನಾಡು, ದೇವಸ್ಥಾನ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಯು.ಸದಾನಂದ ನಾಯಕ್ ಹೊಸಬೆಟ್ಟು, ಅಧ್ಯಕ್ಷ ಉಮೇಶ್ ನಾಯಕ್ ಮೂಳೂರು, ಕಾರ್ಯದರ್ಶಿ ವೆಂಕಟರಮಣ ನಾಯಕ್ ಪುತ್ತೂರು, ಕೋಶಾಧಿಕಾರಿ ಗೋಪಾಲ ನಾಯಕ್ ಕಟ್ಟೆಮಾರ್, ಪ್ರಧಾನ ಅರ್ಚಕ ರಾಮ ನಾಯಕ್ ಪಿದಮಲೆ, ನವೀನ್ ಕುಮಾರ್ ನೇರಳಕಟ್ಟೆ ಹಾಗೂ ವಿವಿಧ ವಿವಿಧ ಸಮಿತಿಗಳ ಪ್ರಮುಖರು ಹಾಜರಿದ್ದರು.


ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಪೂರ್ವಾಹ್ನ ಮಂಜುಳಾ ಗುರುರಾಜ್ ರಾವ್ ಇರಾ ಅವರಿಂದ ಹರಿಕಥಾ ಸಂಕೀರ್ತನೆ, ಸಂಜೆ ಮಧುತಾರಾ ಮೆಲೋಡೀಸ್ ಜಪ್ಪಿನಮೊಗೇರು ಅವರಿಂದ ಗಾನ-ನೃತ್ಯ ವೈಭವ, ರಾತ್ರಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗಳು ನಡೆದವು.


ಫೆ.1ರಂದು ಮಂಗಳವಾರ ಬಿಂಬಶುದ್ಧಿ, ಅನುಜ್ನಾಕಲಶಾಭಿಷೇಕ, ಅನುಜ್ನಾ ಪ್ರಾರ್ಥನೆ, ಜೀವ ಸಂಕೋಚ, ಜೀವಕಲಶ ಹಾಗೂ ಬಿಂಬವನ್ನು ಮೆರವಣಿಗೆಯಲ್ಲಿ ನೂತನ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ತರುವುದು ಮತ್ತಿತರ ಕಾರ್ಯಕ್ರಮಗಳು ನಡೆದವು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post