ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಉತ್ಸವವು ಫೆ.6ರಿಂದ 11ರ ವರೆಗೆ ನಡೆಯಲಿದೆ. ಫೆ.6ರ ರಾತ್ರಿ ಉತ್ಸವದ ಧ್ವಜಾರೋಹಣ ನಡೆಯಲಿದ್ದು, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಫೆ.11ರ ವರೆಗೆ ಉತ್ಸವಗಳು ನಡೆಯಲಿವೆ.
ಉತ್ಸವದ ವಿವರ:
ಫೆ.6ರ ಭಾನುವಾರ ಪಂಚಮಿಯಂದು ಸಂಜೆ 6 ಗಂಟೆಗೆ ಅಗಲ್ಪಾಡಿಯ ಶ್ರೀ ದುರ್ಗಾ ಭಜನಾ ಸಂಘದಿಂದ ಭಜನೆ, ರಾತ್ರಿ 8 ಗಂಟೆಗೆ ಶ್ರೀ ಗಣಪತಿ ಪೂಜೆ, ಧ್ವಜಾರೋಹಣ, 8:30ಕ್ಕೆ ಉಬ್ರಂಗಳದ ಶ್ರೀ ಧರ್ಮಶಾಸ್ತಾ ಭಜನಾ ಸಂಘದಿಂದ ಭಜನೆ, ಬಳಿ ಮಹಾಪೂಜೆ, ಶ್ರೀ ಭೂತಬಲಿ ನಡೆಯಲಿದೆ.
7ರಂದು ಸೋಮವಾರ ಷಷ್ಠಿಯಂದು ಬೆಳಗ್ಗೆ 7:30ಕ್ಕೆ ಉಷಃಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ; ಸಂಜೆ 5:30ಕ್ಕೆ ಭಜನೆ (ಶ್ರೀ ಭಗವತೀ ಭಜನಾ ಸಂಘ ಪೊಡಿಪ್ಪಳ್ಳ), ರಾತ್ರಿ 8:00ಕ್ಕೆ ಮಹಾಪೂಜೆ, ಶ್ರೀ ಭೂತಬಲಿ.
ದಿನಾಂಕ 08ರಂದು ಬೆಳಗ್ಗೆ 7:3ಕ್ಕೆ ಉಷಃಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ; ಸಂಜೆ 5:30ಕ್ಕೆ ಭಜನೆ (ಶ್ರೀ ಗೋಪಾಲಕೃಷ್ಣ ಭಜನಾ ಸಂಘ ಅಗಲ್ಪಾಡಿ), ರಾತ್ರಿ 8:00ಕ್ಕೆ ಮಹಾಪೂಜೆ, ಶ್ರೀ ಭೂತಬಲಿ.
ದಿನಾಂಕ 9ರಂದು ಬುಧವಾರ ಬೆಳಗ್ಗೆ 7:3ಕ್ಕೆ ಉಷಃಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ; ಸಂಜೆ 5:30ಕ್ಕೆ ಭಜನೆ (ಶ್ರೀ ಅಯ್ಯಪ್ಪ ಭಜನಾ ಸಂಘ ಮಾವಿನಕಟ್ಟೆ), ರಾತ್ರಿ 8:00ಕ್ಕೆ ನಡು ದೀಪೋತ್ಸವ, ಮಹಾಪೂಜೆ, ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ರಥೋತ್ಸವ.
ದಿನಾಂಕ 10ರಂದು ಗುರುವಾರ ಬೆಳಗ್ಗೆ 7:3ಕ್ಕೆ ಉಷಃಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 11:30ಕ್ಕೆ ಶ್ರೀ ಜಟಾಧಾರೀ ದೈವದ ಭಂಡಾರ ರಾಜಾಂಗಣಕ್ಕೆ ಆಗಮನ, ಸ್ವೀಕಾರ; ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ; ಸಂಜೆ 5:30ಕ್ಕೆ ಭಜನೆ (ಶ್ರೀ ಮಹಮ್ಮಾಯಿ ಭಜನಾ ಸಂಘ, ಮಾರ್ಪನಡ್ಕ), ರಾತ್ರಿ 8:00ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ, ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ಶಯನ.
ದಿನಾಂಕ 11ರಂದು ಶುಕ್ರವಾರ ಬೆಳಗ್ಗೆ ಕವಾಟೋದ್ಘಾಟನ, ಉಷಃಪೂಜೆ, ಪೂರ್ವಾಹ್ನ 10:00ಕ್ಕೆ ಶ್ರೀ ಭೂತಬಲಿ, ಅವಭೃತ, ನೃತ್ತ, ಬಟ್ಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಮಹಾಪೂಜೆ, ಸಂತರ್ಪಣೆ,
ಸಂಜೆ 6:30ಕ್ಕೆ ಭಜನೆ (ಶ್ರೀ ಧರ್ಮಶಾಸ್ತಾರ ಭಜನಾ ಸಂಘ ಕುರುಮುಜ್ಜಿಕಟ್ಟೆ)
ರಾತ್ರಿ 8:00ಕ್ಕೆ ಮಹಾಪೂಜೆ.
ರಾತ್ರಿ 2:30ಕ್ಕೆ ಶ್ರೀ ಜಟಾಧಾರೀ ದೈವದ ಮಹಿಮೆ, ಅರಸಿನಹುಡಿ ಪ್ರಸಾದ ಸ್ವೀಕಾರ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment