ಮಂಗಳೂರು: ನಗರಾಭಿವೃದ್ದಿ ಸಚಿವರಾದ ಭೈರತಿ ಬಸವರಾಜ್ ಅವರು ಫೆ. 1 ರ ಮಂಗಳವಾರ ನಗರದ ವಿವಿಧ ಸ್ಥಳಿಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಸಚಿವರು ಹಂಪನಕಟ್ಟೆ ಜಂಕ್ಷನ್, ಎಮ್ಮೆಕೆರೆ ಈಜುಕೊಳ, ವೆನ್ ಲಾಕ್ ಆಸ್ಪತ್ರೆಯ ಸರ್ಜಿಕಲ್ ವಿಭಾಗ, ಮಂಗಳಾದೇವಿ ಗುಜ್ಜರ ಕೆÀರೆ, ಕಂಕನಾಡಿ ಮಾರುಕಟ್ಟೆ ಸಂಕೀರ್ಣ, ನಂದಿಗುಡ್ಡ, ಕದ್ರಿ ಪಾರ್ಕ್, ಮಂಗಳ ಕ್ರೀಡಾಂಗಣ, ಮುಡಿಪುವಿನ ಜಲ ಶುಧ್ದಿಕರಣ ಘಟಕಗಳಿಗೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಮಾತನಾಡಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಜೊತೆಗೆ ಇತರೆ ಕಾಮಗಾರಿಗಳನ್ನು ಕೂಡ ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಂದ ನನಗೆ ಯಾವುದೇ ರೀತಿ ದೂರಗಳು ಬರಬಾರದು, ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ಅದಷ್ಟು ಬೇಗ ಪೂರ್ಣಗೊಳಿಸಬೇಕು ಇಲ್ಲದಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಳ ರಾವ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಇತರೆ ಅಧಿಕಾರಿಗಳು ಜೊತೆಗಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment