ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೃತ ಗೃಹರಕ್ಷಕದಳ ಕಛೇರಿ ಸಿಬ್ಬಂದಿಗೆ ಸಹಾಯ ಧನ

ಮೃತ ಗೃಹರಕ್ಷಕದಳ ಕಛೇರಿ ಸಿಬ್ಬಂದಿಗೆ ಸಹಾಯ ಧನ



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಮಂಗಳೂರು ಇಲ್ಲಿ ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇತ್ತೀಚೆಗೆ ಮೃತಪಟ್ಟಿರುವ ಕಿರಣ್ ಕುಮಾರ್ ಇವರ ಕುಟುಂಬದವರಿಗೆ ಕೇಂದ್ರ ಕಛೇರಿಯಿಂದ ಅಂತ್ಯಸಂಸ್ಕಾರ ವೆಚ್ಚವನ್ನು ಮಂಜೂರು ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ದಿ|| ಕಿರಣ್ ಕುಮಾರ್ ರವರ ತಾಯಿ ಶ್ರೀಮತಿ ರಂಗಮ್ಮ ಇವರಿಗೆ ಚೆಕ್ ನೀಡಿದರು.


ಈ ಸಂದರ್ಭದಲ್ಲಿ ಕಛೇರಿಯ ಉಪಸಮಾದೇಷ್ಟರಾದ ರಮೇಶ್, ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜಿ ಸಹಾಯಕಿ ಅನಿತಾ ಟಿ.ಎಸ್, ದಿ|| ಕಿರಣ್ ಕುಮಾರ್ ರವರ ಮಾವ ರಾಜಪ್ಪ, ಸಹೋದರ ಛಲಪತಿ ಮತ್ತು ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್, ಗೃಹರಕ್ಷಕರಾದ ಭವಾನಿ, ಮಂಜುಳಾ, ದಿವಾಕರ್, ದುಷ್ಯಂತ್, ಸುಲೋಚನಾ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post