ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಯಚೂರು ಘಟನೆ: ಜಿಲ್ಲಾ ನ್ಯಾಯಾಧೀಶರನ್ನುಅಮಾನತುಗೊಳಿಸಲು ಉಚ್ಛನ್ಯಾಯಾಲದ ರಿಜಿಸ್ಟ್ರಾರ್ ಜನರಲ್ ಗೆ ಮನವಿ

ರಾಯಚೂರು ಘಟನೆ: ಜಿಲ್ಲಾ ನ್ಯಾಯಾಧೀಶರನ್ನುಅಮಾನತುಗೊಳಿಸಲು ಉಚ್ಛನ್ಯಾಯಾಲದ ರಿಜಿಸ್ಟ್ರಾರ್ ಜನರಲ್ ಗೆ ಮನವಿ



ಬೆಂಗಳೂರು: ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ 73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್  ಅವರ ಭಾವಚಿತ್ರವನ್ನು ತೆಗೆಸಿ ಮಾಡಿರುವ ಅವಮಾನಕರ ಘಟನೆ ವಿರುದ್ದವಾಗಿ, ಅವರನ್ನು ತಕ್ಷಣದಿಂದ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕೊಳ್ಳೆಗಾಲ ಶಾಸಕ ಎಸ್ ಮಹೇಶ್ ಅವರ ನೇತೃತ್ವದ ತಂಡ ಕರ್ನಾಟಕ ಉಚ್ಛನ್ಯಾಯಾಲದ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಸಲ್ಲಿಸಿತು.


ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಎಡ್ವರ್ಟೈಸಿಂಗ್ ನಿಯಮಿತ ಅಧ್ಯಕ್ಷ ಸಿ. ಮುನಿಕೃಷ್ಣ, ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಶ್ರೀ  ಎಸ್. ಮಹದೇವಯ್ಯ ನಂಜನಗೂಡು, ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಯಮಿತ ಅಧ್ಯಕ್ಷ ಡಿ.ಎಸ್. ವೀರಯ್ಯ ಮತ್ತು ಕೊಳ್ಳೆಗಾಲ ಶಾಸಕ ಎಸ್. ಮಹೇಶ್ ಇವರುಗಳನ್ನು ಒಳಗೊಂಡ ನಾಲ್ಕು ಮಂದಿ ಗಣ್ಯರ ತಂಡ ಕರ್ನಾಟಕ ಉಚ್ಛನ್ಯಾಯಾಲದ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಅವರನ್ನು ಭೇಟಿಯಾಗಿ ಮನವಿ ನೀಡಿದೆ.


73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆಯನ್ನು ಈಗಾಗಾಲೇ ರಾಜ್ಯದ ನಾನಾಕಡೆಯಲ್ಲಿ ಹಲವಾರು ಸಂಘಟನೆಗಳು ಪ್ರತಿಭಟಿಸಿರುವುದು ಕಂಡುಬರುತ್ತಿದೆ, ಆದರೂ ಈ ತನಕ ಕ್ರಮಕೈಗೊಳ್ಳಲಿಲ್ಲ. ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಛಾಯಾಚಿತ್ರಕ್ಕೆ ಮಾಡುವ ಅವಮಾನಗಳು ಸಂವಿಧಾನಕ್ಕೆ ತೋರುವ ಅಗೌರವಕ್ಕೆ ಸಮಾನವಾಗಿದೆ. ಇದು ಭಾರತದ ಯಾವುದೇ ಸಾಮಾನ್ಯ ನಾಗರಿಕ ಸಹಿಸಲು ಸಾಧ್ಯವಿಲ್ಲ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್  ಅವರಿಗೆ ಸಾರ್ವಜನಿಕವಾಗಿ ಮಾಡಿರುವ ಇಂತಹ ಶಿಷ್ಟಾಚಾರದ ಅಗೌರವವನ್ನು ಖಂಡಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ. ಇದಕ್ಕೆ ಕಾರಣರಾದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ತಂಡವು ತಮ್ಮ ಮನವಿಯಲ್ಲಿ ತಿಳಿಸಿದೆ.


ರಾಜ್ಯದ ಉಚ್ಛನ್ಯಾಯಾಲದ ರಿಜಿಸ್ಟ್ರಾರ್ ಜನರಲ್ ಅವರು ಸೂಕ್ತ ಕ್ರಮ ಕೈಗೊಂಡು ಇಂತಹ ಘಟನೆಗಳಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ನೀಡಬೇಕು ಹಾಗೂ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಬೇಕು ಎಂದು ತಂಡ ಮನವಿಯಲ್ಲಿ ಉಚ್ಛನ್ಯಾಯಾಲದ ರಿಜಿಸ್ಟ್ರಾರ್ ಜನರಲ್ ಅವರನ್ನು ಒತ್ತಾಯಿಸಿದೆ.

0 تعليقات

إرسال تعليق

Post a Comment (0)

أحدث أقدم