ಮೈಸೂರು: ಪ್ರೇಮಿಗಳು ಇಬ್ಬರ ಪ್ರೀತಿಯನ್ನು ಪೋಷಕರು ಒಪ್ಪದೇ ಅಡ್ಡಿ ಪಡಿಸಿದ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಮೈಸೂರು ಸಮೀಪದ ಸಿಂಗಮಾರನಹಳ್ಳಿಯ ಅರ್ಚನಾ ಹಾಗೂ ರಾಕೇಶ್ ಎಂಬವರು ಪರಸ್ಪರ ಕೆಲ ತಿಂಗಳಿನಿಂದ ಪ್ರೀತಿಸುತ್ತಿದ್ದರು.
ಇವರಿಬ್ಬರ ಪ್ರೀತಿಯ ವಿಚಾರ ಪೋಷಕರಿಗೂ ತಿಳಿದು, ಮದುವೆಯಾಗೋದಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆ.
ಇದೇ ನೋವಿನಿಂದಾಗಿ, ಪರಸ್ಪರ ಪ್ರೀತಿಸುತ್ತಿದ್ದ ಅರ್ಚನಾ ಹಾಗೂ ರಾಕೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
إرسال تعليق