ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ, ಸ್ವಂತ ಮಗನನ್ನು ಕಳೆದುಕೊಂಡ ಪೋಷಕರು ಕಳೆದ ಮೂರು ದಿನದಿಂದ ಮಗನ ಸಾವಿನಿಂದ ನಿತ್ರಾಣಗೊಂಡ ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಪುತ್ರ ವಿಯೋಗದಿಂದ ಊಟ, ನಿದ್ರೆ ಬಿಟ್ಟಿರುವ ಹರ್ಷನ ತಂದೆ-ತಾಯಿ ಇಬ್ಬರ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ.
ಅವರ ಮನೆಗೆ ತೆರಳಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದುಃಖದಿಂದ ಊಟ ಬಿಟ್ಟಿರುವ ಅವರು ಸುಸ್ತಾಗಿರುವ ಕಾರಣ ಗ್ಲುಕೋಸ್ ಸಹ ನೀಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಇಬ್ಬರಿಗೂ ಸರಿಯಾಗಿ ನಿದ್ರೆ ಮಾಡಿ, ಸರಿಯಾದ ಸಮಯಕ್ಕೆ ಊಟ ಸೇವಿಸುವಂತೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.
ವೈದ್ಯರ ಚಿಕಿತ್ಸೆ ನಂತರ ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆಯೆಂದು ತಿಳಿದು ಬಂದಿದೆ.
إرسال تعليق