ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾತಿ ಬಿಟ್ಟು ನೀತಿಯ ಕಟ್ಟುಪಾಡು ಪಾಲಿಸಿ: ಮಾಣಿಲ ಶ್ರೀ ಕರೆ

ಜಾತಿ ಬಿಟ್ಟು ನೀತಿಯ ಕಟ್ಟುಪಾಡು ಪಾಲಿಸಿ: ಮಾಣಿಲ ಶ್ರೀ ಕರೆ




ಮುಡಿಪು: ದೇಶದಲ್ಲಿ ಮತಾಂತರ, ಡ್ರಗ್ಸ್ ಜಾಲ‌ ಮೆರೆಯುತ್ತಿರುವಾಗ ಹಿಂದೂ‌‌ ಸಮಾಜ ಜಾತಿ ಹೆಸರಲ್ಲಿ ವಿಭಜನೆ ಆಗಬಾರದು. ಜಾತಿಯ ಕಟ್ಟುಪಾಡು ಬಿಟ್ಟು ನೀತಿಯ ಕಟ್ಟುಪಾಡುಗಳನ್ನು ನಾವು ಪಾಲಿಸಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.


ಬಂಟ್ವಾಳ ತಾಲೂಕು ಅಮ್ಮೆಂಬಳ ಮಾಗಣೆಯ ಕುರ್ನಾಡು ಪಿದಮಲೆ ಶ್ರೀ ಮಹಮ್ಮಾಯಿ ಕ್ಷೇತ್ರದ ನೂತನ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ಬುಧವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ನಮಗೆ ಮಕ್ಕಳೇ ನಿಜವಾದ ಸಂಪತ್ತು. ಮಕ್ಕಳು ಬೆಳೆಯುತ್ತಾ ಬಂದ ಹಾಗೆ ಡ್ರಗ್ಸ್, ಮತಾಂತರ ಕುರಿತು ಜಾಗ್ರತೆ ಮಾಡಿ ಕಡಿವಾಣ ಹಾಕಬೇಕು ಎಂದ ಸ್ವಾಮೀಜಿ ಶ್ರದ್ಧಾಕೇಂದ್ರಗಳು ಹಿಂದುತ್ವದ ದೂರದೃಷ್ಟಿ ಯಿಂದ ಬೆಳೆಯಬೇಕು ಎಂದು ಕಿವಿ ಮಾತು ಹೇಳಿದರು.


ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, ಧರ್ಮ, ಸಂಸ್ಕೃತಿ ಉಳಿಸುವ ಹೊಣೆ ಎಲ್ಲರ ಮೇಲಿದೆ. ಜಾತಿ ಭೇದ ಮಾಡದೆ ಹಿಂದೂ ಸಮಾಜ ಉಳಿಸುವ ಕಾರ್ಯ ಆಗಬೇಕಾಗಿದೆ ಎಂದರು.


ಮೈಸೂರು ಎಲೆಕ್ಟ್ರಿಕಲ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳ್ಯಾರ್ ಮಾತನಾಡಿ, ಎಲ್ಲ ಅಡೆತೆಡಗಳನ್ನು ದಾಟಿ ನೂತನ ದೇವಸ್ಥಾನದ ನಿರ್ಮಾಣಕ್ಕೆ ಮಹಾಮ್ಮಾಯಿಯ ಸಂಕಲ್ಪವೇ ಪ್ರೇರಣೆ ಎಂದರು.


ಬ್ರಹ್ಮಕಲಶೋತ್ಸವದ ರೂವಾರಿ ಕಿಶೋರ್ ನಾಯಕ್ ನಾಗುರಿ,  ವೈದ್ಯೆ, ಡಾ.ಸುರೇಖಾ ಅಮರನಾಥ ಶೆಟ್ಟಿ, ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜಯರಾಮ ಶೆಟ್ಟಿ, ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ. ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ ಮತ್ತಿತರರು ಮಾತನಾಡಿದರು.


ದೇವಸ್ಥಾನದ ಬ್ರಹ್ಮಕಲಶೋತ್ಸವದ ದಾನಿಗಳು, ಸಮಾರಂಭದ ಯಶಸ್ಸಿಗೆ ದುಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಾಲಕೃಷ್ಣ ಸುವರ್ಣ ಕಂಡಿಮಾರು ಹಾಗೂ ವಿಜಯ ಶೆಟ್ಟಿ ಕುರ್ನಾಡು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم