ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅರಣ್ಯಾಧಿಕಾರಿ ಧನ್ಯಶ್ರೀ ನಾಪತ್ತೆ

ಅರಣ್ಯಾಧಿಕಾರಿ ಧನ್ಯಶ್ರೀ ನಾಪತ್ತೆ

 


ರಾಮನಗರ: ಸಾಮಾಜಿಕ ಅರಣ್ಯ ಇಲಾಖೆಯ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಧನ್ಯಶ್ರೀ (31) ನಾಪತ್ತೆ ಆಗಿದ್ದು, ಈ ಬಗ್ಗೆ ಅವರ ಸಹೋದರಿ ಚನ್ನಪಟ್ಟಣ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಿನಾಂಕ 21 ರಂದು ಬೆಳಿಗ್ಗೆ 10ಕ್ಕೆ ಎಂದಿನಂತೆ ಮನೆಯಿಂದ ಸರ್ಕಾರಿ ವಾಹನದಲ್ಲಿ ಕಚೇರಿಗೆ ತೆರಳಿದ್ದ ಧನ್ಯಶ್ರೀ ಹಿಂತಿರುಗಿ ಮನೆಗೆ ಬಂದಿಲ್ಲ.

ಅವರ ಮೊಬೈಲ್‌ ಸ್ವಿಚ್‌ ಆಫ್ ಆಗಿದ್ದು, ಬಂಧುಗಳು- ಸ್ನೇಹಿತರ ಸಂಪರ್ಕಕ್ಕೆ ಸಿಗುತ್ತಿಲ್ಲ.

ಚನ್ನಪಟ್ಟಣ ತಾಲ್ಲೂಕಿನವರಾದ ಧನ್ಯಶ್ರೀ ಈ ಮೊದಲು ಆನೇಕಲ್‌ನಲ್ಲಿ ಸೇವೆ ಸಲ್ಲಿಸಿ, ವರ್ಷದ ಹಿಂದೆ ಚನ್ನಪಟ್ಟಣಕ್ಕೆ ವರ್ಗಾವಣೆ ಆಗಿದ್ದರು.


0 تعليقات

إرسال تعليق

Post a Comment (0)

أحدث أقدم