ನಿಟ್ಟೆ: ಡಾ| ಎನ್.ಎಸ್.ಎ.ಎಂ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅನಸೂಯ ದೇವಿಯವರನ್ನು ಇತ್ತೀಚೆಗೆ ನಡೆದ ನಿಟ್ಟೆ ರೋಟರಿ ವಾರದ ಸಭೆಯಲ್ಲಿ ಸನ್ಮಾನಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರೊ.ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ರೊ.ನಿರಂಜನ್ ಚಿಪ್ಲುಂಕರ್, ರೊ. ಯೋಗೀಶ್ ಹೆಗ್ಡೆ, ರೊ. ಸುಮನಾ, ರೊ.ವೀಣಾದೇವಿ, ರೊ. ಶಶಿಕಲ ಶೆಟ್ಟಿ ಸನ್ಮಾನಿಸಿದರು.
ಅಭಿನಂದನಾ ಭಾಷಣ ಮಾಡಿದ ರೊ.ಯೋಗೀಶ್ ಹೆಗ್ಡೆಯವರು ಸನ್ಮಾನಿತರ ಸೇವಾಪರತೆ, ಕರ್ತವ್ಯನಿಷ್ಠೆ, ಅರ್ಪಣಾ ಮನೋಭಾವದ ಬಗೆಗೆ ಮಾತನಾಡಿದರು. ಅನಸೂಯ ಅವರು ಸನ್ಮಾನಕ್ಕೆ ಉತ್ತರಿಸುತ್ತಾ ಪ್ರತೀ ವ್ಯಕ್ತಿಯ ಜೀವನವೇ ಒಂದು ಸಂದೇಶದಂತಿದ್ದು, ಇತರರು ಪಾಲಿಸುವಂತಿರಬೇಕು ಎಂದರು. ಇಂಟರಾಕ್ಟ್ ಕ್ಲಬ್ ಸದಸ್ಯರು ದೇಶಭಕ್ತಿ ಗೀತೆಗಳನ್ನು ಹಾಡಿದರು.
ರೋ. ಶಶಿಕಲ ವಂದಿಸಿದರು. ಮಾಜಿ ಅಸಿಸ್ಟೆಂಟ್ ಗವರ್ನರ್ ರೊ. ತುಕಾರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق