ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಂದೆಯ 6ನೇ ವರ್ಷದ ತಿಥಿ ದಿನವೇ, ಮಗಳು ಗ್ಯಾಸ್ ಸ್ಫೋಟ ದಿಂದ ಸಾವು

ತಂದೆಯ 6ನೇ ವರ್ಷದ ತಿಥಿ ದಿನವೇ, ಮಗಳು ಗ್ಯಾಸ್ ಸ್ಫೋಟ ದಿಂದ ಸಾವು

 


ಬೆಂಗಳೂರು: ತಂದೆಯ ತಿಥಿ ಕಾರ್ಯದ ದಿನವೇ ಮಗಳು ಕೂಡ ಸಾವನ್ನಪ್ಪಿದ ಘಟನೆಯೊಂದು ಕೆ.ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪರಮೇಶ್ವರಿ (42) ಮೃತ ದುರ್ದೈವಿ. ಪರಮೇಶ್ವರಿ ಅವರ ಮನೆಯಲ್ಲಿ ತಂದೆ ಕಾಶಿನಾಥ್ ಅವರ 6ನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆಯುತಿತ್ತು.

ತಿಥಿ ಕಾರ್ಯಕ್ಕೆ ನಾನ್ ವೆಜ್ ಅಡುಗೆ ಮಾಡಲು ಸಿಲಿಂಡರ್ ತರಿಸಲಾಗಿತ್ತು. ಮನೆ ಚಿಕ್ಕದಾಗಿದ್ದು ಕೋಣೆಯಲ್ಲೇ ಸಿಲಿಂಡರ್​ ಇಟ್ಟು ಅಡುಗೆ ಮಾಡಲು ತಯಾರಿ ನಡೆಸಲಾಗುತಿತ್ತು. ಈ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಟೌವ್ ಬೆಂಕಿಯಿಂದ ಸ್ಫೋಟಗೊಂಡಿದೆ. ಘಟನೆಯಲ್ಲಿ ಪರಮೇಶ್ವರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮನೆಯಲ್ಲಿದ್ದ ಉಳಿದ ಆರು ಮಂದಿಗೆ ಗಾಯಗಳಾಗಿದ್ದು, ವಿಕ್ಟೋರಿಯಾ ಬರ್ನಿಂಗ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಶಿನಾಥ್​ ಪತ್ನಿ ಸೌಭಾಗ್ಯ (75) ಅವರ ದೇಹ ಹೆಚ್ಚು ಸುಟ್ಟಿದೆ. ಮಗ ಶರವಣ (43), ಸಂಬಂಧಿ ಪರಮಶಿವಂ (47), ಪರಮಶಿವಂ ಪತ್ನಿ ಭುವನೇಶ್ವರಿ (40) ಮತ್ತೊಬ್ಬ ಸಂಬಂಧಿ ಮಾಲಾ (60) ಗಂಭೀರ ಗಾಯಗೊಂಡಿದ್ದಾರೆ.

ಘಟನೆ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم