ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಕ್ಷದಲ್ಲಿ ಮಾಡಿದ ಸೇವೆಯಿಂದ ಉತ್ತಮ ಸ್ಥಾನ: ವೇಣು

ಪಕ್ಷದಲ್ಲಿ ಮಾಡಿದ ಸೇವೆಯಿಂದ ಉತ್ತಮ ಸ್ಥಾನ: ವೇಣು



ಚಿಕ್ಕಮಗಳೂರು: ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಗರಸಭಾ ಅಧ್ಯಕ್ಷರಾಗಿ ವರಸಿದ್ದಿ ವೇಣುಗೋಪಾಲ್ ಅವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಸೊಸೈಟಿಯ ಕಛೇರಿಯಲ್ಲಿ ಗುರುವಾರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.


ಅಭಿನಂದನಾ ಸ್ವೀಕರಿಸಿ ಮಾತನಾಡಿದ ಅವರು ಸೊಸೈಟಿಯಲ್ಲಿ ನಿರ್ದೇಶಕರಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಸಂಘವನ್ನು ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಜೊತೆಗೆ ನನ್ನ ರಾಜಕೀಯ ಬೆಳವಣಿಗೆಗೂ ಸೊಸೈಟಿ ಮುಖ್ಯವಾದ ಪಾತ್ರ ವಹಿಸಿದೆ ಎಂದು ಹೇಳಿದರು.


ನಗರಸಭಾ ಅಧ್ಯಕ್ಷ ಸ್ಥಾನದ ನಿರೀಕ್ಷೆಯನ್ನು ಹೊಂದಿರದ ನಾನು ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಜನರ ಆರ್ಶೀವಾದ ಹಾಗೂ ಕಳೆದ ಕೆಲವು ವರ್ಷಗಳಿಂದ ಪಕ್ಷದಲ್ಲಿ ಮಾಡಿದಂತಹ ಕೆಲಸಗಳನ್ನು ಗುರುತಿಸಿ ಪಕ್ಷ ಹಾಗೂ ಶಾಸಕರು ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ ಇದನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ತಿಳಿಸಿದರು.


ನಗರದಲ್ಲಿ ಶೌಚಾಲಯ ನಿರ್ಮಾಣ, ರಸ್ತೆಗಳಲ್ಲಿ ಉತ್ತಮ ಗುಣಮಟ್ಟದ ಡಾಂಬರೀಕರಣ, ನಗರ ಸ್ವಚ್ಚತೆ, ಪಾರ್ಕ್, ಕುಡಿಯುವ ನೀರು ಅಭಿವೃಧ್ದಿ ಸೇರಿದಂತೆ ಹಲವಾರು ಕಾರ್ಯಕ್ರಮವನ್ನು ನಗರದ ಜನತೆಗೆ ನೀಡಲು ಮುಂದಾಗಿದ್ದು. ಈ ಸಂಬಂಧ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಅದನ್ನು ಸದುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೊಸೈಟಿಯ ಅಧ್ಯಕ್ಷ ಸಿ.ಎಸ್. ಕೇಶವಮೂರ್ತಿ ಸೊಸೈಟಿಯ ನಿರ್ದೇಶಕರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ನಗರಸಭಾ ಅಧ್ಯಕ್ಷರಾಗಿರುವ ವರಸಿದ್ದಿ ವೇಣುಗೋಪಾಲ್ ಮುಂದಿನ ದಿನಗಳಲ್ಲಿ ನಗರದ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೆಲಸ ಮಾಡಲಿ ಶುಭ ಹಾರೈಸಿದರು.


ಸೊಸೈಟಿಯ ಮೀನುಗಲ್ಲಿಯಲ್ಲಿರುವ ಮಳಿಗೆಗಳು ಕೆಲವು ಸಮಸ್ಯೆಗಳಿಂದ ಕೂಡಿದ್ದು ಸಂಘಕ್ಕೆ ಹೊಸ ಕಟ್ಟಡ ನಿರ್ಮಾಣಗೊಳಿಸಲು ಅಡ್ಡಿಪಡಿಸಲಾಗುತ್ತಿದೆ. ಆದ್ದರಿಂದ ಸೊಸೈಟಿಯ ಮಳಿಗೆಗಳ ವಿಚಾರವನ್ನು      ಪರಿಗಣಿಸುವ ಮೂಲಕ ಸೊಸೈಟಿಗೆ ನೂತನ ಕಟ್ಟಡ ನಿರ್ಮಾಣಗೊಳಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಟಿ.ರಾಜಶೇಖರ್, ಸೊಸೈಟಿಯ ಉಪಾಧ್ಯಕ್ಷ ಸಿ.ಆರ್.ಗಂಗಾಧರ್, ಸದಸ್ಯರುಗಳಾದ ಸಿ.ಕುಮಾರ್, ಬಿ.ಎನ್.ರಾಜಣ್ಣಶೆಟ್ಟಿ, ಸಿ.ಆರ್.ಕೇಶವಮೂರ್ತಿ, ಗಿರಿಧರ್ ಯತೀಶ್, ಪ್ರಶಾಂತ್, ಎಂ.ಶ್ರೀನಿವಾಸ್, ಜಯಂತಿ, ಅಂಬಿಕಾ, ಮಲ್ಲೇಶ್, ಕಾರ್ಯದರ್ಶಿ ಗಾಯತ್ರಿ, ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ನಿರ್ದೇಶಕ ಬಿ.ಎಂ. ಕುಮಾರ್, ಸಿಬ್ಬಂದಿಗಳಾದ ಗೀತಾ, ಮೋಹನ್‍ಕುಮಾರ್, ಉದಯ್ ಮತ್ತಿತರರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free counter

0 Comments

Post a Comment

Post a Comment (0)

Previous Post Next Post