ಬಾಗಲಕೋಟೆ: ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆಯೊಂದು ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ಬಳಿ ಗದಗ ಬಾಗಲಕೋಟೆ ಮಾರ್ಗದಲ್ಲಿ ನಡೆದಿದೆ.
ಬಸನಗೌಡ ಪಾಟಿಲ್(60), ಮಂಜುನಾಥ ಮಾರನಬಸರಿ(38) ಹಾಗೂ ಸಂಗಮ್ಮ ಪಾಟೀಲ್(55) ಮೃತ ದುರ್ದೈವಿಗಳು.
ಮೃತರು ಸಂಬಂಧಿಕರ ಅಂತ್ಯಸಂಸ್ಕಾರಕ್ಕೆಂದು ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮಕ್ಕೆ ಬಂದಿದ್ದರು.
ಸಂಜೆ ವೇಳೆ ಕಾರ್ಯ ಮುಗಿಸಿ ರಾತ್ರಿ ತಮ್ಮ ಊರಿಗೆ ವಾಪಸ್ ಹೊರಟಿದ್ದರು. ಈ ವೇಳೆ ಎದುರಿಗೆ ಬಂದ ಟ್ರ್ಯಾಕ್ಟರ್ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
Post a Comment