ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಲಿವುಡ್ ಖ್ಯಾತ ಗಾಯಕ ಬಪ್ಪಿ ಲಹರಿ ನಿಧನ

ಬಾಲಿವುಡ್ ಖ್ಯಾತ ಗಾಯಕ ಬಪ್ಪಿ ಲಹರಿ ನಿಧನ

 


ಮುಂಬೈ: ಬಾಲಿವುಡ್‍ನ ಖ್ಯಾತ ಗಾಯಕ, ಸಂಗೀತ ನಿದೇರ್ಶಕ ಬಪ್ಪಿ ಲಹರಿ ಅನಾರೋಗ್ಯ ಸಮಸ್ಯೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.


69 ವರ್ಷದ ಬಪ್ಪಿ ಲಹರಿ ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದಾಗಿ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.


ಆದರೆ ಮಂಗಳವಾರ ಅವರ ಆರೋಗ್ಯ ಹದಗೆಟ್ಟಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಧ್ಯರಾತ್ರಿ OSA (ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ಕಾರಣದಿಂದಾಗಿ ನಿಧನರಾದರು ಎಂದು ಕ್ರಿಟಿಕೇರ್ ಆಸ್ಪತ್ರೆಯ ನಿರ್ದೇಶಕ ಡಾ ದೀಪಕ್ ನಾಮಜೋಶಿ ಮಾಧ್ಯಮಗಳಿಗೆ ತಿಳಿಸಿದರು.

0 تعليقات

إرسال تعليق

Post a Comment (0)

أحدث أقدم