ದೇರೆಬೈಲ್: ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ದೇರೆಬೈಲ್ ದಕ್ಷಿಣ ವಾರ್ಡ್ 24 ರಲ್ಲಿ ಒಟ್ಟು 22.5 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಲೇಮಾರ್ ಮುಖ್ಯರಸ್ತೆಯಿಂದ ಪ್ರಶಾಂತ್ ನಗರ ಬಡಾವಣೆಯನ್ನು ಸಂಪರ್ಕಿಸುವ ರಸ್ತೆಯ ಕಾಂಕ್ರೀಟಿಕರಣ ಮತ್ತು ಮಾಲೇಮಾರ್ ಮುಖ್ಯರಸ್ತೆಯಿಂದ ಆರ್ಯಮಾರ್ಗ ರಸ್ತೆಯನ್ನು ಕಾಂಕ್ರೀಟಿಕರಣ ಗೊಳಿಸಲಾಗಿದ್ದು, ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಶನಿವಾರ ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ ನೆಕ್ಕಿಲಗುಡ್ಡೆ ಪರಿಸರದಲ್ಲಿ ಎಜೆ ಹಾಸ್ಟೆಲಿನ ಹಿಂಬದಿಯಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಬೃಹತ್ ತಡೆಗೋಡೆ ಆದಷ್ಟು ಶೀಘ್ರದಲ್ಲಿ ಆರಂಭಗೊಳ್ಳಲಿದ್ದು, ಶಾಸಕರು ಕಾಮಗಾರಿ ನಡೆಯಲಿರುವ ಪರಿಸರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕರೊಂದಿಗೆ ಸ್ಥಳೀಯ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್,ಶಶಿಧರ್ ಹೆಗ್ಡೆ, ಪ್ರಮುಖರಾದ ಚರಿತ್ ಪೂಜಾರಿ, ಶಕ್ತಿಕೇಂದ್ರ ಪ್ರಮುಖ್ ಸೂರ್ಯನಾರಾಯಣ ತುಂಗಾ, ರಾಘವೇಂದ್ರ ಉಡುಪ, ಆಲ್ವಿನ್, ಬೂತ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ರಾವ್, ಪ್ರೀತಮ್, ಪಕ್ಷದ ಹಿರಿಯರು, ಪದಾಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment