ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಸ್ತು ಕಲಿಸುವ ಸ್ಥಳದಲ್ಲೇ ಅಶಿಸ್ತು ಪ್ರದರ್ಶಿಸುವ ಮಂದಿಯನ್ನು ಮೊದಲು ಟಿಸಿ ಕೊಟ್ಟು ಮನೆಗೆ ಕಳಿಸಿ

ಶಿಸ್ತು ಕಲಿಸುವ ಸ್ಥಳದಲ್ಲೇ ಅಶಿಸ್ತು ಪ್ರದರ್ಶಿಸುವ ಮಂದಿಯನ್ನು ಮೊದಲು ಟಿಸಿ ಕೊಟ್ಟು ಮನೆಗೆ ಕಳಿಸಿ



-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ


ಶಾಲೆ ಎನ್ನುವುದು ಒಂದು ವಿದ್ಯಾ ದೇಗುಲ. ಕಲಿಸುವ ಗುರುಗಳು ಪೂಜನೀಯ ಇದು ನಮ್ಮ ದೇಶದ ಸಂಸ್ಕಾರ. ಹಿಂದೆ ಗುರುಕುಲ ಶಿಕ್ಷಣ ದಲ್ಲಿ ಗುರುವಿಗಿದ್ದ ಉನ್ನತ ಸ್ಥಾನ ಇಂದಿಲ್ಲ. ಅದೇನೇ ಇರಲಿ ಬೆಳೆಯುವ ಸಿರಿ ಮೊಳಕೆಯಲ್ಲೇ ಗೊತ್ತಾಗುತ್ತದೆ. ಅಂತಹ ಮೊಳಕೆಯನ್ನು ತಿದ್ದಿ, ತೀಡಿ ಸಂಸ್ಕಾರಯುಕ್ತರನ್ನಾಗಿ ಮಾಡುವುದೇ ಈ ಗುರುಗಳ ಕಾಯಕ.


ಅಂತಹ ದೈವ ಸ್ವರೂಪಿ ಗುರುಗಳಿಗೆ, ವಿದ್ಯಾ ದೇಗುಲಕ್ಕೆ, ಯಾವುದೊ ಕ್ಷುಲ್ಲಕ ಕಾರಣ ಹೇಳಿ ಅಪಚಾರ ಎಸಗುತ್ತಿರುವ ಇಂತಹ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ನೀಡ ಬೇಕಿದೆ. ಇಂದು ನಮ್ಮ ಧರ್ಮದ ವಸ್ತ್ರ ಎನ್ನುತ್ತಿರುವ ಮಂದಿ ನಾಳೆ ಲುಂಗಿ, ಬುರ್ಖಾ, ಲಂಗೋಟಿಯಲ್ಲಿ ಬರಬಹುದು. ಇಂತಹ ಅನಾಗರೀಕ ಬೇಡಿಕೆಗಳು ಅಸಂಬದ್ಧ.


ಒಂದು ಧರ್ಮದ ಓಲೈಕೆ ನಡೆದರೆ ಇನ್ನೊಂದು ಧರ್ಮ ಚಕಾರ ಎತ್ತಿಯೇ ಎತ್ತುತ್ತದೆ. ಮೊದಲು ಅಧ್ಯಾಪಕರನ್ನು, ಶಾಲೆಗಳನ್ನೂ ಬೈಯ್ಯುವ, ಅರಚುವ ಅನಾಗರಿಕ ಮನಸ್ಥಿತಿಯ ಮಂದಿಯನ್ನು ಜಾತ್ಯತೀತವಾಗಿ, ಪಕ್ಷಾತೀತವಾಗಿ. ಟಿ.ಸಿ ಕೊಟ್ಟು ಮನೆಗೆ ಕಳುಹಿಸಿ. ಹಾಗೆ ಅವರನ್ನು ಬೆಂಬಲಿಸುವ ಉಗ್ರಗಾಮಿ ಪ್ರವೃತ್ತಿಯ ಜನರನ್ನು ಕಾನೂನಿನ ಚೌಕಟ್ಟಲ್ಲಿ ಬಂಧಿಸಿ ಈ ಕೆಲಸ ನಿಷ್ಪಕ್ಷವಾಗಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಡೆದಲ್ಲಿ ಮಾತ್ರ. ಭಾರತೀಯ ಶಿಕ್ಷಣ ವ್ಯವಸ್ಥೆ ಯನ್ನು ಸರಿದಾರಿಗೆ ತರಲು ಸಾಧ್ಯ. ಮೊಳಕೆಯಲ್ಲೇ ಈ ಅಸಭ್ಯ ವರ್ತನೆ ಯನ್ನು ಚಿವುಟಿ ಹಾಕದಿದ್ದರೆ ಮುಂದೆ ಇದೆ ಕಿಡಿ ದೇಶಕ್ಕೆ ಮಾರಕ ವಾಗಬಹುದು ಎಚ್ಚರ.

ಇದಕ್ಕೆ ಉತ್ತರ ಸ್ಪಷ್ಟ

ಶಿಸ್ತು ಕಲಿಸುವ ಸ್ಥಳದಲ್ಲೇ ಅಶಿಸ್ತು ಪ್ರದರ್ಶಿಸುವ ಮಂದಿಯನ್ನು ಮೊದಲು ಟಿಸಿ ಕೊಟ್ಟು ಮನೆಗೆ ಕಳುಹಿಸಿ.


0 تعليقات

إرسال تعليق

Post a Comment (0)

أحدث أقدم