ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರ್ನಾಟಕದ ಶಾಲಾ ಕಾಲೇಜುಗಳ ಸಮವಸ್ತ್ರಕ್ಕೊಂದು ಸ್ವಷ್ಟ ನೀತಿಸಂಹಿತೆ ಬೇಕು

ಕರ್ನಾಟಕದ ಶಾಲಾ ಕಾಲೇಜುಗಳ ಸಮವಸ್ತ್ರಕ್ಕೊಂದು ಸ್ವಷ್ಟ ನೀತಿಸಂಹಿತೆ ಬೇಕು



ಇಂದು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಾದ ವಿವಾದ ಶಿಸ್ತು ಅಶಿಸ್ತುಗಳಿಗೆ ಕಾರಣವಾಗುತ್ತಿರುವುದು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಮವಸ್ತ್ರಕ್ಕೊಂದು ಸ್ಬಷ್ಟ ನೀತಿ ಸರ್ಕಾರ ಇದುವರೆಗೆ ತೆಗೆದು ಕೊಳ್ಳದೇ ಇರುವುದು. ಅದು ಸರಕಾರಿ ಕಾಲೇಜು ಇರ ಬಹುದು ಖಾಸಗಿ ಕಾಲೇಜುಗಳೆ ಇರಬಹುದು. ಹೆಚ್ಚಿನ ಸಂಸ್ಥೆಗಳಲ್ಲಿ ಸಮವಸ್ತ್ರ ಅನ್ನುವುದು ಕಾಟಾಚಾರಕ್ಕೆ ಧರಿಸುವ ಫ್ಯಾಷನ್ ವಸ್ತುಗಳಾಗುತ್ತಿದೆ. ಹಾಗಾಗಿ ಇಂದು ಹಲವು ಸಂಸ್ಥೆಗಳಲ್ಲಿ ಸಮವಸ್ತ್ರ ಸಮಸ್ಯೆಯಾಗುತ್ತಿದೆ. ಮಾತ್ರವಲ್ಲ ಸಮವಸ್ತ್ರದ ಪಾವಿತ್ರ್ಯ ಹಾಳುಮಾಡುವ ಪ್ರಸಂಗಗಳು ತಲೆ ಎತ್ತಿ ಬಂದಿವೆ.


ಈ ನಿಟ್ಟಿನಲ್ಲಿ ಕೇರಳ ಸರಕಾರ ವಿದ್ಯಾರ್ಥಿಗಳ ಸಮವಸ್ತ್ರದ ಕುರಿತಾಗಿ ಒಂದು ಸ್ವಷ್ಟ ನಿರ್ಧಾರಕ್ಕೆ ಬಂದಿದೆಯಂತೆ. ಸಮವಸ್ತ್ರದ ಮೇಲೆ ಯಾವುದೇ ಧರ್ಮದ ಸಂಕೇತ ಬರುವ ವಸ್ತು/ ಬಟ್ಟೆಗಳನ್ನು ಧರಿಸಬಾರದು. ಸಮವಸ್ತ್ರ ಸಮವಸ್ತ್ರವಾಗಿಯೇ ಇರ ಬೇಕು. 

ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 

ಇಂತಹ ಒಂದು ಕಠಿಣವಾದ ನಿಧಾ೯ರವನ್ನು ನಮ್ಮ ರಾಜ್ಯದಲ್ಲಿ ಯಾಕೆ ತೆಗೆದುಕೊಳ್ಳ ಬಾರದು? ಕೇರಳದಲ್ಲಿ ಯಾರೂ ಕೂಡಾ ಅದನ್ನು ತಮ್ಮ ಹಕ್ಕು ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಬೊಬ್ಬೆ ಹಾಕುವವರಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಮಾನವ ಹಕ್ಕು ಮೂಲಭೂತ ಹಕ್ಕಿಗೆ ಚ್ಯುತಿ ಆಗಿದೆ ಎಂದು ರಾಷ್ಟ್ರ ವ್ಯಾಪಿಯಾಗಿ ಸುದ್ದಿ ಹಬ್ಬಿಸುತ್ತಾರೆ. ನಮ್ಮಲ್ಲಿ ಕಾನೂನಿನ ಹೆದರಿಕೆ ಮತ್ತು ಅನುಷ್ಠಾನದ ಕೊರತೆಯೇ ಇದಕ್ಕೆ ಕಾರಣ ಅನ್ನುವುದು ಸ್ವಷ್ಟವಾಗಿ ಕಾಣುತ್ತಿದೆ.


ಇದಾಗಲೆ ನನ್ನ ಗಮನಕ್ಕೆ ಬಂದ ಹಾಗೆ ಕೆಲವೊಂದು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೂಡಾ ಸಮವಸ್ತ್ರದ ಮೇಲೆ ಧರಿಸುವ ತೆಳುವಾದ ಶಾಲುಗಳನ್ನೆ ತಲೆ ಹೊಟ್ಟೆ ಕೈಕಾಲುಗಳಿಗೆ ಸುತ್ತಿಕೊಂಡು ಬರುವ ಅದೆಷ್ಟೊ ಉದಾಹರಣೆ ನಮ್ಮ ಮುಂದೆ ಇದೆ. ಸಮವಸ್ತ್ರವೆಂದರೆ ಅದರ ಗಾತ್ರ ಪಾತ್ರ ವಿನ್ಯಾಸ ಉಡುಗೆ ತೊಡುಗೆಗಳಲ್ಲಿ ಏಕತೆ ಇರಬೇಕು. ಇದನ್ನು ಗಮನಿಸುವುದು ಆಯಾಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಸ್ವಷ್ಟ ಮಾರ್ಗಸೂಚಿಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಕಟಿಸಲೇಬೇಕು. ಇದರಿಂದಾಗಿ ವಿದ್ಯಾರ್ಥಿಗಳಿಗಾಗಲಿ ಹೆತ್ತವರಿಗಾಗಲಿ ಯಾವುದೇ ಗೊಂದಲ ಬರುವುದಿಲ್ಲ. ಶಿಕ್ಷಣ ವಲಯದಲ್ಲಿ ಸಮವಸ್ತ್ರ ಸಮಾನತೆಯ ಆಧಾರದಲ್ಲಿ ಅನುಷ್ಠಾನಗೊಳ್ಳಬೇಕು. ಇದು ಜಾತಿ ಧರ್ಮ ಮೀರಿದ ಧ್ವನಿಯಾಗಬೇಕು. ಇಲ್ಲವಾದಲ್ಲಿ ಸಮವಸ್ತ್ರಕ್ಕೊಂದು ಪೂರ್ಣ ವಿರಾಮವಿಡಿ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post