ಮೂಡುಬಿದಿರೆ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾಗಿ ವೇಣುಗೋಪಾಲ ಶೆಟ್ಟಿ ಕೆ. ಆಯ್ಕೆಯಾಗಿದ್ದಾರೆ. ಪ್ರಸ್ತುತ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಇವರು, ಆಳ್ವಾಸ್ ನುಡಿಸಿರಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಾರ್ಯಕ್ರಮ ನಿರೂಪಕರಾಗಿ ಜನಪ್ರಿಯರಾಗಿರುವ ವೇಣುಗೋಪಾಲ ಶೆಟ್ಟಿಯವರು ಮೂಡುಬಿದಿರೆ ತುಳುಕೂಟದ ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸಿದ್ದಾರೆ. ಇವರು ಕೃಷಿ ಹಾಗೂ ಪರಿಸರ ಪ್ರೀತಿಯ ಜತೆಗೆ ಸಾಮಾಜಿಕ ಕಾರ್ಯ ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಥೆ ಮತ್ತು ಕವಿತೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, `ಮುತ್ತೆತ್ತೂರಿನ ದರ್ಗಾ' ಎಂಬ ಕಥಾಸಂಕಲನವನ್ನೂ ಪ್ರಕಟಿಸಿದ್ದಾರೆ.
إرسال تعليق