ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಪಘಾತದಲ್ಲಿ ಅಣ್ಣ ಸಾವು, ಹೃದಯಾಘಾತದಿಂದ ತಂಗಿಯೂ ಸಾವು

ಅಪಘಾತದಲ್ಲಿ ಅಣ್ಣ ಸಾವು, ಹೃದಯಾಘಾತದಿಂದ ತಂಗಿಯೂ ಸಾವು

 


ಮೈಸೂರು: ರಸ್ತೆ ಅಪಘಾತದಲ್ಲಿ ಸಹೋದರನ ಮೃತದೇಹ ಕಂಡು ತೀವ್ರ ಹೃದಯಾಘಾತಕ್ಕೊಳಗಾಗಿ ಸಹೋದರಿಯೂ ಸಾವನ್ನಪ್ಪಿರುವ ಘಟನೆಯೊಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.

ಕೊಡಗಿನ ಪೊನ್ನಪೇಟೆಯ ನಿವಾಸಿ ಮಂಜುನಾಥ್ ಮತ್ತು ರತ್ನ ದಂಪತಿಯ ಮಗಳಾದ ರಶ್ಮಿ (21) ಸಾವನ್ನಪ್ಪಿರುವ ಯುವತಿ.

ಇವರು ಮೈಸೂರಿನ ವಿಜಯ ನಗರದಲ್ಲಿ ವಾಸವಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದರು.

ಯುವತಿ ರಶ್ಮಿಯ ದೊಡ್ಡಪ್ಪನ ಮಗ ಕೀರ್ತಿರಾಜ್ ಸೋಮವಾರ ರಾತ್ರಿ ಹುಣಸೂರು ತಾಲೂಕಿನ ಮೈಸೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟರು.  

ಬಳಿಕ ಅಣ್ಣನ ಮೃತದೇಹ ನೋಡಲು ರಶ್ಮಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಬಂದಿದ್ದಳು. ಈ ವೇಳೆ ಅಣ್ಣನ ಮೃತದೇಹ ಕಂಡ ಆಕೆ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಳು.

ತಕ್ಷಣ ಪೋಷಕರು ರಶ್ಮಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم