ಸುರಪುರ (ಕಲಬುರಗಿ ಜಿಲ್ಲೆ): ಸಂಕ್ರಮಣ ಪ್ರಯುಕ್ತ ಶನಿವಾರ ಕುಟುಂಬದೊಂದಿಗೆ ಶೆಳ್ಳಗಿ ಸಮೀಪದ ಕೃಷ್ಣಾ ನದಿಗೆ ಪುಣ್ಯಸ್ನಾನಕ್ಕೆ ತೆರಳಿದ್ದ ತಾಲ್ಲೂಕಿನ ರುಕ್ಮಾಪುರ ಗ್ರಾಮದ ನಿವಾಸಿ ಕಾವೇರಿ ಕೊಟ್ರೆಪ್ಪ ಮಿಣಜಿಗಿ (36) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇವರು ಕುಂಬಾರಪೇಟೆಯ ಪ್ರೇರಣಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
ಶಿಕ್ಷಕಿ ಜೊತೆಗೆ ಸ್ನಾನಕ್ಕೆ ನದಿಗೆ ಇಳಿದಿದ್ದ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರನ್ನು ಕಾವೇರಿ ಪತಿ ಕೊಟ್ರೆಪ್ಪ ಮತ್ತು ಜನರು ಸೀರೆ, ಧೋತಿ ಎಸೆದು ಅವರನ್ನು ರಕ್ಷಿಸಿದರು.
ಕಾವೇರಿ ಮೃತದೇಹವನ್ನು ಸುರಪುರ ತಾಲ್ಲೂಕು ಆಸ್ಪತ್ರೆಗೆ ತರಲಾಯಿತು. 'ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಬಂದು ಹುಡುಕಾಟ ನಡೆಸಿ ಶವ ಹೊರತೆಗೆದಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗಿದ್ದ ಅಂಜಲಿ ಮತ್ತು ಭಾನುಪ್ರಿಯ ಚೇತರಿಸಿಕೊಂಡಿದ್ದು, ಕೊಟ್ರೆಪ್ಪ ಅವರ ತಂಗಿಯ ಮಗ ವಿಶ್ವಾರಾಧ್ಯನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
Post a Comment