ಬೆಳ್ತಂಗಡಿ: ಇಲ್ಲಿಯ ಚಾರ್ಮಾಡಿ ಸುಣ್ಣದ ಗೂಡು ಬಳಿ ಬಸ್ ಮತ್ತು ಬೈಕ್ ನಡುವೆ ಶನಿವಾರ ನಡೆದ ಅಪಘಾತದಲ್ಲಿ ಪೊಂಗರ್ದಡಿ ನಿವಾಸಿ ದಯಾನಂದ (47) ಮೃತಪಟ್ಟಿದ್ದಾರೆ.
ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದು, ಅವರು ಕಕ್ಕಿಂಜೆಯಲ್ಲಿ ಕೋಳಿ ಮಾಂಸದ ಅಂಗಡಿಯನ್ನು ಹೊಂದಿದ್ದರು.
ಬಸ್ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದು ಮೃತ ದಯಾನಂದರು ಕಕ್ಕಿಂಜೆಯಿಂದ ಸಂಜೆ ಚಾರ್ಮಾಡಿಯ ತನ್ನ ಮನೆಗೆ ಹೋಗುತ್ತಿದ್ದರು.
ಇವರ ಬೈಕ್‌ನಲ್ಲಿದ್ದ ಮಹಿಳೆ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment