ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಮವಸ್ತ್ರ ಹಾಕಿಕೊಂಡು ಬನ್ನಿ ಎಂದರೆ ಅದಕ್ಕೇಕೆ ಇಷ್ಟು ಗಲಾಟೆ?

ಸಮವಸ್ತ್ರ ಹಾಕಿಕೊಂಡು ಬನ್ನಿ ಎಂದರೆ ಅದಕ್ಕೇಕೆ ಇಷ್ಟು ಗಲಾಟೆ?




ಅಯ್ಯೋ ವಿದ್ಯಾ ದೇಗುಲದ ಸಮವಸ್ತ್ರಕ್ಕೂ ಇಷ್ಟೊಂದು ಹೇೂರಾಟವೇ? ಬಹು ಹಿಂದೆ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಎಂಬ ಪರಿಕಲ್ಪನೆ ಇರಲಿಲ್ಲ. ಸಮವಸ್ತ್ರ ಹುಟ್ಟಿ ಕೊಂಡ ಉದ್ದೇಶ ಬಹುಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ಶ್ರೀಮಂತರ ಬಡವರ ಬೇರೆ ಬೇರೆ ಜಾತಿ ಧರ್ಮದ ವಿದ್ಯಾರ್ಥಿಗಳು ಓದುವಾಗ ಮಕ್ಕಳಲ್ಲಿ ಯಾವುದೇ ಗರಿಮೆ ಕೀಳರಿಮೆ ಹುಟ್ಟಬಾರದು ಅನ್ನುವ ದೃಷ್ಟಿಯಿಂದ ಸಮವಸ್ತ್ರವನ್ನು ಪ್ರಾರಂಭಿಸಲಾಯಿತು. ಆದರೆ ಕೆಲವು ಖಾಸಗಿ ವಿದ್ಯಾ ಸಂಸ್ಥೆಗಳು ತಮ್ಮ ಘನತೆ ಗೌರವ ಪ್ರತಿಷ್ಠಿತೆಯ ಸಂಕೇತವೆಂಬಂತೆ ಸಿರಿವಂತಿಕೆಯನ್ನು ಪ್ರತಿಬಿಂಬಿಸುವ ಸಮವಸ್ತ್ರಗಳನ್ನು ಅಳವಡಿಸಿಕೊಂಡವು.


ಈಗಿನ ವಿಶೇಷತೆ ಅಂದರೆ ಸಿರಿವಂತರು ಅಳವಡಿಸಿಕೊಂಡ ಸಮವಸ್ತ್ರಕ್ಕೆ ಯಾವುದೇ ಚ್ಯುತಿ ಬರಲಿಲ್ಲ ಕಾನೂನಿನ ಪ್ರಶ್ನೆ ಬಂದಿರುವುದು ಬಡ ಮಧ್ಯಮ ವರ್ಗದವರು ಓದುವ ಸರ್ಕಾರಿ ಶಾಲೆಯಲ್ಲಿನ ಸಮವಸ್ತ್ರಕ್ಕೆ ಅನ್ನುವುದು ಅತ್ಯಂತ ಬೇಸರದ ವಿಚಾರ. ಇದಕ್ಕೆ ನಮ್ಮ ಆರ್ಥಿಕ ಬಡತನ ಮಾತ್ರ ಕಾರಣವಲ್ಲ ಮನಸ್ಸಿನ ಬಡತನವೂ ಕಾರಣ ಅನ್ನುವುದು ಅಷ್ಟೇ ಸತ್ಯ.


ಸಮವಸ್ತ್ರ ಬಿಡಿ ಸಮಾವಸ್ತ್ರವಾದರೂ ಹಾಕಿಕೊಂಡು ಬನ್ನಿ ಅಂದರೆ ವಸ್ತ್ರ ಹಾಕುವುದು ಬಿಡುವುದು ನಮ್ಮಮೂಲ ಭೂತ ಹಕ್ಕು ಎನ್ನುತ್ತ ಅದನ್ನು ಪ್ರಶ್ನಿಸುವ ಮಟ್ಟಿಗೆ ನಾವು ಶಿಕ್ಷಣ ಪಡೆದಿದ್ದೇವೆ ನೋಡಿ. ಇದು ನಾವು ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಅರಿತುಕೊಂಡ ಪರಿ.


ನಮ್ಮ ಸಂವಿಧಾನ ನಮಗೆ ಕೊಟ್ಟ ಧಾಮಿ೯ಕ ಹಕ್ಕಿನಲ್ಲಿ ಸ್ವಷ್ಟವಾಗಿ ಹೇಳಿದೆ (ಅನುಚ್ಛೇದ 25ರಿಂದ 28)ಧಮ೯ ಆಚರಣೆ ನಂಬಿಗೆ ಸಂಪ್ರದಾಯಗಳೆಲ್ಲವೂ ನಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದೇ ಹೊರತು ಸಾರ್ವಜನಿಕ/ ಸರಕಾರಿ ವ್ಯವಸ್ಥೆಯೊಳಗೆ ಅದನ್ನು ತರುವ ಹಾಗಿಲ್ಲ. ಅದು ಯಾವುದೇ ಧರ್ಮವಿರ ಬಹುದು. ಇಂದು ಶಾಲೆ, ನಾಳೆ ಪೊಲೀಸ್ ಇಲಾಖೆಯಲ್ಲಿ ಸೇರಿ ನನಗೆ ನನ್ನ ಧರ್ಮದ ಉಡುಗೆ ಧರಿಸಬೇಕು ಎಂದು ವಾದ ಮಂಡಿಸಿದರೆ ಸಂವಿಧಾನದ ಉತ್ತರ ಏನಿ ಬಹುದು? ನೀವೇ ಆಲೋಚಿಸಿ.


ಶಿಕ್ಷಣ ಸಂಸ್ಥೆಯಲ್ಲಿ ಪುರುಷ ಅಧ್ಯಾಪಕರು ನಮ್ಮಮುಖ ತಲೆ ನೇೂಡಬಾರದು ಅನ್ನುವ ಕಾರಣಕ್ಕೆ ನಾವು ಮುಚ್ಚಿ ಕೊಳ್ಳಬೇಕಾಗಿದೆ ಅಂದ್ರೆ ನಾವೆಂತಹ ಜಾತ್ಯತೀತ ರಾಷ್ಟ್ರದಲ್ಲಿದ್ದೇವೆ ನೀವೇ ಚಿಂತನೆ ಮಾಡಿ. ಅಂದರೆ ನಾವು ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ನೀಡಲು ತಯಾರಿ ಮಾಡಿದ್ದೇವೆ ಅನ್ನುವುದನ್ನು ಮತ್ತೊಮ್ಮೆ ಕಣ್ಣು ತೆರೆದು ನೇೂಡಬೇಕಾಗಿದೆ.


ಪರೀಕ್ಷಾ ಸಂದರ್ಭದಲ್ಲಂತೂ ಇಂತಹ ವಸ್ತ್ರಗಳ ಧಾರಣೆಯಿಂದಲೆ ಹತ್ತು ಹಲವು ಸಮಸ್ಯೆಗಳು ಹುಟ್ಟಿಕೊಂಡ ಉದಾಹರಣೆಗಳು ಸಾಕಷ್ಟು ಇದೆ.


ನಮ್ಮ ಸಂವಿಧಾನವಾಗಲಿ ನ್ಯಾಯಾಂಗವಾಗಲಿ ಇಂತಹ ಸಂಕುಚಿತವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ಸಂಬಂಧಪಟ್ಟ ಶಿಕ್ಷಣದ ಅಧಿಕಾರಿಗಳು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹೆತ್ತವರ ಜೊತೆ ಕೂಡಿ ಮಾತಾಡಿ ಮಕ್ಕಳಿಗೆ ತರಗತಿ ಪ್ರವೇಶ ಮಾಡಿಕೊಡಿ ಅನ್ನುವ ನಿದೇ೯ಶನ ನೀಡಿ ತೀರ್ಪನ್ನು ಕಾದಿರಿಸಬಹುದು. ಇದು ನನ್ನ ಅಭಿಪ್ರಾಯ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم