ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿರ್ವಹಣಾ ಶಾಸ್ತ್ರದ ಪ್ರಸ್ತುತತೆ: ವಿಶೇಷ ಉಪನ್ಯಾಸ

ನಿರ್ವಹಣಾ ಶಾಸ್ತ್ರದ ಪ್ರಸ್ತುತತೆ: ವಿಶೇಷ ಉಪನ್ಯಾಸ


ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ನಿರ್ವಹಣಾ ವಿಭಾಗ, ದಿನಾಂಕ: 11/01/2022 ರಂದು MSNIM ಬೊಂದೆಲ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ನಡುವೆ ಒಡಂಬಡಿಕೆ ಹಾಗೂ ನಿರ್ವಹಣಾಶಾಸ್ತ್ರ ಶಿಕ್ಷಣದ ಪ್ರಸ್ತುತತೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದಲ್ಲಿ  ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರವಿಶಂಕರ್.ಬಿ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ.ಮೊಲಿ.ಚೌಧುರಿ, ಡೈರೆಕ್ಟರ್, MSNIM ಬೊಂದೆಲ್ ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ರೀಮಾ ಆಗ್ನೇಸ್ ಫ್ರಾಂಕ್ ಸಹಾಯಕ ಪ್ರೊಫೆಸರ್ MSNIM ಬೊಂದೆಲ್ ಇವರು ಆಗಮಿಸಿದ್ದರು. ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.


ಪ್ರೊ.‌ಡಾ.ಲೋಕೇಶ್ IQAC ಸಂಚಾಲಕರು ಒಡಂಬಡಿಕೆಯ ಬಗ್ಗೆ ವಿವರಿಸಿದರು. ಪ್ರಾಂಶುಪಾಲರಾದ ಪ್ರೊ.ರವಿಶಂಕರ್.ಬಿ ಹಾಗೂ ಡಾ.ಮೊಲಿ. ಎಸ್ ಚೌಧರಿ ಸಹಿ ಹಾಕುವ ಮೂಲಕ MSNIM ಬೊಂದೆಲ್ ಹಾಗೂ  ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ನಡುವೆ ಒಡಂಬಡಿಕೆ ಮಾಡಲಾಯಿತು.

ಡಾ.ಮೊಲಿ. ಎಸ್ ಚೌಧರಿ ಇವರು ವಿದ್ಯಾರ್ಥಿಗಳಿಗೆ ತಮ್ಮ ‌ವೃತ್ತಿ ಜೀವನದ ಬಗ್ಗೆ ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವುದು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು, ಉತ್ತಮ ಹವ್ಯಾಸಗಳನ್ನು ರೂಪಿಸಿಕೊಳ್ಳುವುದು, ಸಂವಹನ ಕಲೆಯನ್ನು ಬೆಳೆಸಿಕೊಳ್ಳುವುದು, ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಮಾರ್ಗದರ್ಶನವನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರವಿಶಂಕರ್.ಬಿ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.


ಸಂಪನ್ಮೂಲ ವ್ಯಕ್ತಿಯಾದ ಪ್ರೊ.ರೀಮಾ ಆಗ್ನೇಸ್ ಫ್ರಾಂಕ್ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ಹಾಗೂ ವೃತ್ತಿ ಜೀವನದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮವು ರಂಜನ್ ಇವರ ನಿರೂಪಣೆಯಲ್ಲಿ ಅಭಿಷೇಕ್ ಇವರ ಸ್ವಾಗತ ದೊಂದಿಗೆ, ಜಯಲಕ್ಷ್ಮೀ ಇವರು ಸಂಪನ್ಮೂಲ ವ್ಯಕ್ತಿಯಾದ ಪ್ರೊ.ರೀಮಾ ಆಗ್ನೇಸ್ ಫ್ರಾಂಕ್ ಇವರ ಕಿರುಪರಿಚಯವನ್ನು ಮಾಡಿ ದೀಕ್ಷಿತಾ ಇವರು ಧನ್ಯವಾದವಿತ್ತರು. ಈ ಕಾರ್ಯಕ್ರಮದಲ್ಲಿ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೀತಿ.ಕೆ.ರಾವ್, ಕಾರ್ಯಕ್ರಮದ ಸಂಚಾಲಕರಾದ ಪ್ರೊ ಸಂತೋಷ್ ಪ್ರಭು ಎಂ, ಕಾಲೇಜಿನ ಭೋಧಕ ಮತ್ತು ಭೋಧಕೇತರ ವೃಂದದವರು ಹಾಗೂ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم