ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಾಯಕಿ ಶೀಲಾ ದಿವಾಕರ್ ಅವರಿಗೆ ನಾಳೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

ಗಾಯಕಿ ಶೀಲಾ ದಿವಾಕರ್ ಅವರಿಗೆ ನಾಳೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

 



ಮಂಗಳೂರು: ಅವಿಭಜಿತ ದ.ಕ ಜಿಲ್ಲೆಯಲ್ಲಿ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಗೈದ ಜಿಲ್ಲೆಯ ಹೆಚ್ಚಿನ ಭರತನಾಟ್ಯ ಕಲಾವಿದರಿಗೆ ಕಂಠದಾನ ಮಾಡಿದ ಶ್ರೀಮತಿ ಶೀಲಾ ದಿವಾಕರ್ ದಿನಾಂಕ 26ರಂದು ದೈವಾಧಿನಾರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಶನಿವಾರ (ಜ.29) ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ.


ಆ ಪ್ರಯುಕ್ತ, ನೃತ್ಯ ಪರಿಷತ್ ಹಾಗೂ ಮಣಿ ಕೃಷ್ಣಸ್ವಾಮಿ ಅಕಾಡೆಮಿ, (ರಿ) ಜಂಟಿಯಾಗಿ ದಿನಾಂಕ 29 ಶನಿವಾರ ಸಂಜೆ 5 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯ ಇಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.


ಸಂಗೀತ-ನೃತ್ಯ ಪ್ರೇಮಿಗಳು, ಗಾಯಕಿ ಶೀಲಾ ದಿವಾಕರ್ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಗಲಿದ ಕಲಾವಿದೆಗೆ ನುಡಿನಮನ ಸಲ್ಲಿಸಬಹುದಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم