ನೀರ್ಚಾಲು: ಶುಕ್ರವಾರದಂದು (ಜ.28) ಕಲ್ಲಕಟ್ಟದಲ್ಲಿ ನಾರಾಯಣ ಭಟ್ ಪಾಡಿ ಇವರ ಮನೆಯ ಸಮೀಪದ ಪಾಡಿ ಶ್ಯಾಮ್ ಭಟ್ ಮತ್ತು ಪಾಡಿ ನಾರಾಯಣ ಭಟ್ಟರಿಗೆ ಸೇರಿದ ಸ್ಥಳದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಗಾಗಿ 'ಮುಳಿಹುಲ್ಲು ಸಂಗ್ರಹಿಸುವ' ಕಾರ್ಯ ನಡೆಯಿತು.
ಈ ಸಂಬಂಧ ನಾರಾಯಣ ಭಟ್ ಪಾಡಿ ಮತ್ತು ಶ್ರೀಮತಿ ವಿಜಯಲಕ್ಷ್ಮೀ ಕಲ್ಲಕಟ್ಟ ಮುಳ್ಳೇರಿಯಾ ಮಂಡಲದ ಮಾತೆಯರಿಗೆ, ಮಕ್ಕಳಿಗೆ ಮತ್ತು ಮಹನೀಯರಿಗೆ ತುಂಬಾ ಸಹಕಾರವನ್ನು ನೀಡೀದರು. ಮತ್ತು ಗೋಕಿಂಕರರ ಈ ಕಾರ್ಯಕ್ಕೆ ಪಕ್ಕದ ಕ್ಲಬ್‌ನ ಸದಸ್ಯರೂ ಸೇರಿಕೊಂಡಿದ್ದರು.
ಮುಳ್ಳೇರಿಯಾ ಮಂಡಲದ ಮಾತೆಯರು (ಮಾತೃವಿಭಾಗ), ವಿದ್ಯಾರ್ಥಿವಾಹಿನಿ ವಿಭಾಗದ ಮಕ್ಕಳು ಮತ್ತು ಮಹನೀಯರು ಸೇರಿದಂತೆ ಸುಮಾರು 70 ಮಂದಿ ಗೋಕಿಂಕರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಶ್ರೀಮತಿ ವಿಜಯಲಕ್ಷ್ಮೀಯವರು ಗೋಕಿಂಕರರಿಗೆಲ್ಲ ಬಾಯಾರಿಕೆಗೆ ಮಜ್ಜಿಗೆನೀರು, ಜ್ಯೂಸ್‌ಗಳು, ತಿಂಡಿಯ ವ್ಯವಸ್ಥೆ, ವಿವಿಧ ಹಣ್ಣುಗಳು ಸೇರಿದಂತೆ ಭರ್ಜರಿಯಾದ ಆತಿಥ್ಯವನ್ನೇ ನೀಡಿದರು. ಒಂದು ಲೋಡು ಮುಳಿಹುಲ್ಲನ್ನು ಗೋಶಾಲೆಗೆ ಸಾಗಿಸಲಾಯಿತು.
ಸಂಜೆ ಆರರ ಹೊತ್ತಿಗೆ "ಸೇವಾ ಅರ್ಘ್ಯ- ಗೋವಿಗಾಗಿ ಮೇವು, ಮೇವಿಗಾಗಿ ನಾವು" ಕಾರ್ಯಕ್ರಮ ಸಮಾಪ್ತಿಯಾಯಿತು.
-ಅಭಿಜ್ಞಾ ಭಟ್ ಬೊಳುಂಬು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق