ಸುಳ್ಯ; ಇಂದು ದಿ-28.01.2022 ನೇ ಶುಕ್ರವಾರದಂದು ಐವರ್ನಾಡು ಗ್ರಾಮವಿಕಾಸ ಸಭಾಭವನದಲ್ಲಿ ಬೃಹತ್ ಕೋವಿಡ್ ಲಸಿಕಾ ಮೇಳ ಮಧ್ಯಾಹ್ನ ಗಂಟೆ 1.00 ರವರೆಗೆ ನಡೆಯಲಿದೆ.
ಮೊದಲನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ ಇದು ಕೊನೆಯ ಅವಕಾಶವಾಗಿರುತ್ತದೆ. ಆದ್ದರಿಂದ ಮೊದಲನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಎಲ್ಲಾ ಗ್ರಾಮಸ್ಥರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಕೋರಿದೆ.
ತಪ್ಪಿದ್ದಲ್ಲಿ ಅಂತಹವರ ಸರಕಾರಿ ಸೌಲಭ್ಯಗಳನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಮುಂದುವರಿದು, ಮೊದಲನೇ ಡೋಸ್ ಪಡೆದು ಅವಧಿ ಪೂರ್ಣಗೊಂಡ ಎಲ್ಲಾ ಗ್ರಾಮಸ್ಥರು ಕೂಡ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವಂತೆ ಕೋರಿದೆ.
إرسال تعليق