ಮಂಗಳೂರು: ಸ್ಥಳೀಯ ಸಾತ್ವಿಕ ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯು 73ನೇ ಗಣರಾಜ್ಯೋತ್ಸವ ಅಂಗವಾಗಿ ಜ. 28 ರಿಂದ ಜ.30 ರವರೆಗೆ 3 ದಿನ ಎಲ್ಲ ವಯೋಮಾನದವರಿಗಾಗಿ ಇಂಗ್ಲೀಷ್ ಭಾಷಾ ತರಬೇತಿ ನೀಡಲಿದೆ.
ತರಬೇತಿಯಲ್ಲಿ ಮಂಗಳೂರಿನ ಹೆಸರಾಂತ ಭಾಷಾ ಪಂಡಿತರಾದ ನೆವಿಲ್ ರೋಡ್ರಿಗ್ಸ್ ಅವರು ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಮಾತನಾಡುವುದು ಹೇಗೆ? ಸಭೆ ಸಮಾರಂಭಗಳಲ್ಲಿ ತಮ್ಮ ಸ್ವ ಪರಿಚಯ ಮಾಡಿಕೊಳ್ಳುವುದು ಹೇಗೆ? ಅಲ್ಲದೇ ಇಂಗ್ಲೀಷ್ ಭಾಷೆಯಿಂದ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವುದು ಹೇಗೆ? ಎಂಬುದರ ಕುರಿತು ವಾಟ್ಸ್‌ಅಪ್ ಸಾಮಾಜಿಕ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ ನೆವಿಲ್ ರೋಡ್ರಿಗ್ಸ್ 8971899088 ಅವರನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق