ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಜಕೂಡ್ಲು ಗೋಶಾಲೆಯ ಗೋವುಗಳಿಗೆ ಮೇವು ಸಂಗ್ರಹ; ವಾರದೊಳಗೆ ಎರಡನೇ ಸೇವಾ ಅರ್ಘ್ಯ

ಬಜಕೂಡ್ಲು ಗೋಶಾಲೆಯ ಗೋವುಗಳಿಗೆ ಮೇವು ಸಂಗ್ರಹ; ವಾರದೊಳಗೆ ಎರಡನೇ ಸೇವಾ ಅರ್ಘ್ಯ


ಕುಂಬಳೆ ಸಮೀಪದ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ದಿನಾಂಕ ಜ. 16 ರಂದು ಸೇವಾ ಅರ್ಘ್ಯ ಕಾರ್ಯಕ್ರಮ ಜರಗಿತು.


ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗಾಗಿ ಮುಳಿಹುಲ್ಲು ಸಂಗ್ರಹಣಾ ಕಾರ್ಯವು ಮುಳ್ಳೇರಿಯ ಮಂಡಲದ ಯುವ ವಿಭಾಗದ ನೇತೃತ್ವದಲ್ಲಿ ಗೋಪ್ರೇಮಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.


ಮುಳ್ಳೇರಿಯ ಮಂಡಲ ಯುವ ವಿಭಾಗ ಪ್ರಧಾನ ಕೇಶವಪ್ರಕಾಶ ಮುಣ್ಚಿಕಾನ ಧ್ವಜಾರೋಹಣ ನಡೆಸಿದರು. ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗುಂಪೆ ವಲಯದ ಅಧ್ಯಕ್ಷರಾದ ಬಿ.ಎಲ್ ಶಂಭು ಹೆಬ್ಬಾರ್ ಶ್ರಾವಣಕೆರೆ ಸ್ವಾಗತಿಸಿದರು.


ಡಾ. ವೈ.ವಿ. ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು,ಗುರುಮೂರ್ತಿ ಮೇಣ, ಬಾಲ ಸುಬ್ರಹ್ಮಣ್ಯ ಸರ್ಪಮೂಲೆ, ಗೀತಾಲಕ್ಮೀ ಮುಳ್ಳೇರಿಯಾ, ಪದ್ಮಾವತಿ ಡಿ ಪಿ, ಕೇಶವ ಪ್ರಸಾದ ಎಡಕ್ಕಾನ, ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಜಗದೀಶ ಬಿ ಜಿ, ನವ ಸೇವಾ ವೃಂದದ ಕಾರ್ಯಕರ್ತರು ಸೇರಿದಂತೆ ಮುಳ್ಳೇರಿಯ ಮಂಡಲದ ಪದಾಧಿಕಾರಿಗಳು, ವಿವಿಧ ವಲಯಗಳ ಪದಾಧಿಕಾರಿಗಳು, ಸಾಮಾಜಿಕ ಧುರೀಣರು, ವಿದ್ಯಾರ್ಥಿಗಳು, ಮಾತೆಯರು ಸೇವಾ ಅರ್ಘ್ಯದ ಮೂಲಕ ಗೋವಿಗಾಗಿ ಮೇವು ಸಂಗ್ರಹಣಾ ಕಾರ್ಯದಲ್ಲಿ ಕೈ ಜೋಡಿಸಿದರು.


ಗೋಕಿಂಕರರಿಗೆ ಉಪಾಹಾರ, ಸಿಹಿತಿಂಡಿ, ಕಬ್ಬಿನಹಾಲು, ಮಜ್ಜಿಗೆ ನೀರು ಇತ್ಯಾದಿಗಳನ್ನು ಎಸ್.ಪಿ ಕಿಚನ್ ಪೆರ್ಲ, ಗಣೇಶ್ ಬೇಕರಿ ನೀರ್ಚಾಲ್, ಭಟ್ & ಭಟ್ ಸೋದರರು, ಮುಣ್ಚಿಕಾನ ಗಣೇಶ್ ಭಟ್ ಹಾಗೂ ಯುವ ವಿಭಾಗದ ಸದಸ್ಯರು- ಬೆಂಗಳೂರು ಎಂಜಿನೀಯರ್ಸ್ ತಂಡ, ಪಳ್ಳತ್ತಡ್ಕ ಹವ್ಯಕ ವಲಯ ಮೊದಲಾದವರು ಪ್ರಾಯೋಜಕತ್ವ ವಹಿಸಿ ವಿತರಿಸಿದರು.


ಸಂಗ್ರಹವಾದ ಮುಳಿಹುಲ್ಲನ್ನು ಅಮೃತಧಾರಾ ಗೋಶಾಲೆಗೆ ಲಾರಿಯ ಮೂಲಕ ಸಾಗಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಗುಂಪೆ ವಲಯ ಯುವಪ್ರಧಾನ ವಿನಯಶಂಕರ ಚೆಕ್ಕೆಮನೆ ಧನ್ಯವಾದ ಸಮರ್ಪಣೆ ಮಾಡಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم