ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆರೆಗೆ ಬಿದ್ದು ತಂದೆ ಮತ್ತು ಮಗ ಆತ್ಮಹತ್ಯೆ

ಕೆರೆಗೆ ಬಿದ್ದು ತಂದೆ ಮತ್ತು ಮಗ ಆತ್ಮಹತ್ಯೆ



ಮಂಡ್ಯ :- ಪತ್ನಿಯ ಅನೈತಿಕ ಸಂಬಂಧ ಮತ್ತು ಕಿರುಕುಳಕ್ಕೆ ಬೇಸರಗೊಂಡಿದ್ದ ತಂದೆ ಮತ್ತು 7 ವರ್ಷದ ಗಂಡು ಮಗ ಡೆತ್ ನೋಟ್ ಬರೆದಿಟ್ಟು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ  ರಾತ್ರಿ ವೇಳೆ ಘಟನೆ ನಡೆದಿದ್ದು ಗ್ರಾಮದ ಗಂಗಾಧರ್ (38) ಸ್ನೇಹಿತರಿಗೆ ಕರೆ ಮಾಡಿ ಮಗ ಯಶವಂತ್ (7 ವರ್ಷ) ಆತನನ್ನು ನೀರಿಗೆ ತಳ್ಳಿ ಬಳಿಕ ತಾನೂ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ರಾತ್ರಿಯೇ ಸ್ನೇಹಿತರು ಆತನಿಗೆ ಹುಡುಕಾಡಿದ್ರು‌ ಶವಗಳು ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ ಗ್ರಾಮದ ಹೊರವಲಯದ ಕೆರೆಯ ಪಕ್ಕದಲ್ಲಿ ಚಪ್ಪಲಿ, ಮೊಬೈಲ್ ಪೋನ್ ಹಾಗೂ ಡೆತ್ ನೋಟ್ ಪತ್ತೆಯಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಶವಗಳನ್ನು ಹೊರ ತೆಗೆದಿದ್ದಾರೆ.

ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0 تعليقات

إرسال تعليق

Post a Comment (0)

أحدث أقدم