ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆ್ಯಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟಿಕೆ ನಡೆಸಿದ ಕಾರು ಚಾಲಕ ಬಂಧನ

ಆ್ಯಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟಿಕೆ ನಡೆಸಿದ ಕಾರು ಚಾಲಕ ಬಂಧನ

 


ಮಂಗಳೂರು: ಕಾರು ಚಾಲಕನೊಬ್ಬ ಆಂಬ್ಯುಲೆನ್ಸ್​ಗೆ ದಾರಿ ಬಿಡದೆ ಪುಂಡಾಟಿಕೆ ನಡೆಸಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

ಭಟ್ಕಳಕ್ಕೆ ರೋಗಿ ಕರೆದುಕೊಂಡು ಹೊರಟಿದ್ದ ಆಂಬ್ಯುಲೆನ್ಸ್​ಗೆ ಮುಲ್ಕಿಯಲ್ಲಿ ಕಾರು ಎದುರಾಗಿದ್ದು, ಎಷ್ಟೇ ಸೈರನ್​ ಹಾಕಿದರೂ ಕೂಡ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದಾನೆ.

ಇದೇ ರೀತಿ ಸುಮಾರು 40 ಕಿಲೋಮೀಟರ್ ಅಂದರೆ ಉಡುಪಿ ವರೆಗೆ ದಾರಿ ಬಿಡದೆ ಕಾರು ಚಾಲಕ ಉದ್ಧಟತನ ಮೆರೆದಿದ್ದಾನೆ.

KA19MD6843 ನಂಬರ್ ಪ್ಲೇಟ್ ಹಾಕಿದ್ದ ಕಾರು ಮತ್ತೆ ರಾತ್ರಿಯೂ ಕೂಡ ಮತ್ತೊಂದು ಆಂಬ್ಯುಲೆನ್ಸ್​ಗೆ ದಾರಿ ಬಿಡದೆ ಇದೇ ರೀತಿ ಪುಂಡಾಟಿಕೆ ಮೆರೆದಿದ್ದಾನೆ ಎನ್ನಲಾಗಿದೆ.

0 Comments

Post a Comment

Post a Comment (0)

Previous Post Next Post