ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಅಪಘಾತ; ಮೂವರು ಸಾವು, ಒಬ್ಬರಿಗೆ ಗಾಯ

ಕಾರು ಅಪಘಾತ; ಮೂವರು ಸಾವು, ಒಬ್ಬರಿಗೆ ಗಾಯ

 


ಸೋಲಾಪುರ: ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ತೇರಾ ಮೈಲ್ ಹತ್ತಿರ ಸ್ಕಾರ್ಪಿಯೋ ಕಾರು ಭಾನುವಾರ ನಸುಕಿನ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಇದ್ದ ಗಿಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸೋಲಾಪುರ ನಗರದ ಕಿಶೋರ್ ಭೋಸ್ಲೆ(45), ನಿತಿನ್ ಭಾಂಗೆ(32), ವೆಂಕಟೇಶ್ ಮೇತ್ರೆ (45) ಸಾವಿಗೀಡಾದವರು ಎಂದು ಗುರುತಿಸಲಾಗಿದೆ.

ರಾಕೇಶ್ ಹುಚ್ಚೆ ಗಂಭೀರ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಔರಾದ್‌ನಿಂದ ಸೋಲಾಪುರಗೆ ತೆರಳುತ್ತಿದ್ದಾಗ ಈ ಕಾರು ಅಪಘಾತ ಸಂಭವಿಸಿದೆ.


0 تعليقات

إرسال تعليق

Post a Comment (0)

أحدث أقدم