ಚಳ್ಳಕೆರೆ: ಸರ್ಕಾರಿ ಉದ್ಯೋಗ ಸಿಗದೇ ಮನನೊಂದ ಡಿಪ್ಲೊಮಾ ಪದವೀಧರ ತಾಲ್ಲೂಕಿನ ಇಮಾಂಪುರದ ಬಳಿ ಕಲ್ಲಿನ ಕ್ವಾರೆಯ ಬಳಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರಹರಿನಗರದ ಚೇತನ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ.
ಚೇತನ್ ಡಿಪ್ಲೊಮಾ ಪದವಿ ಮುಗಿದ ಬಳಿಕ 7-8 ಬಾರಿ ಉದ್ಯೋಗ ಕ್ಕೆ ಅರ್ಜಿ ಹಾಕಿಕೊಂಡು ಕೆಲಸಕ್ಕೆ ಕಾಯುತ್ತಾ ಇದ್ದರು. ಮುಂದೆ ನನಗೆ ಸರ್ಕಾರಿ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎಂದು ಆಗಾಗ ತಂದೆ ಮಹಾಂತೇಶ್ ಅವರ ಬಳಿ ಬೇಸರ ವ್ಯಕ್ತಪಡಿಸುತ್ತಿದ್ದರು.
ಆಗ ತಂದೆ ಮಗನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಸದಾ ಕೆಲಸದ ಬಗ್ಗೆ ಚಿಂತಿಸಿ ಮನನೊಂದಿದ್ದ ಚೇತನ್ ಬೆಳಿಗ್ಗೆ 'ವಾಕಿಂಗ್‌ಗೆ ಹೋಗಿ ಬರುತ್ತೇನೆ' ಎಂದು ಮನೆಯಲ್ಲಿ ಹೇಳಿ ಹೋದವರು ಮರಳಿ ಬರಲಿಲ್ಲ.
ಗಾಬರಿಗೊಂಡ ತಂದೆ ಮಹಾಂತೇಶ್, ನಗರದ ಎಲ್ಲಾ ಕಡೆ ಹುಡುಕಿ ಸುಳಿವು ಸಿಗಲಿಲ್ಲ. ನಂತರ ಇಮಾಂಪುರದ ಕಲ್ಲಿನ ಕ್ವಾರೆಯ ನೀರಿನಲ್ಲಿ ಶವ ತೇಲಾಡುತ್ತಿರುವ ಮಾಹಿತಿ ತಿಳಿದು ತಂದೆ ಹಾಗೂ ಆತನ ಸಂಬಂಧಿಗಳು ಸ್ಥಳಕ್ಕೆ ಹೋಗಿ ಅಲ್ಲಿ ಬಿದ್ದಿದ್ದ ಮೊಬೈಲ್ ನೋಡಿ ಮಗನ ಮೊಬೈಲ್ ನಿಂದ ಗುರುತು ಪತ್ತೆಹಚ್ಚಿದ್ದಾರೆ.
3 ದಿನಗಳ ಹಿಂದೆ ಕಾಣೆಯಾಗಿದ್ದ ಚೇತನ್ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಚಳ್ಳಕೆರೆ ಠಾಣೆಯ ಎಸ್‌ಐ ಎಸ್.ಜೆ. ತಿಪ್ಪೇಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
إرسال تعليق