ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 30 ನಾಗರಿಕರು ಚಲಿಸುತ್ತಿದ್ದ ವಾಹನದ ಮೇಲೆ ಹಿಮಪಾತ; ಎಲ್ಲರ ರಕ್ಷಣೆ ಮಾಡಿದ ಯೋಧರು

30 ನಾಗರಿಕರು ಚಲಿಸುತ್ತಿದ್ದ ವಾಹನದ ಮೇಲೆ ಹಿಮಪಾತ; ಎಲ್ಲರ ರಕ್ಷಣೆ ಮಾಡಿದ ಯೋಧರು



ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಸೋಮವಾರ ನಾಗರಿಕರು ಚಲಿಸುತ್ತಿದ್ದ ವಾಹನದ ಮೇಲೆ ಹಿಮಪಾತವಾಗಿದ್ದು, ಅದರಲ್ಲಿ ಸಿಲುಕಿದ್ದ ಒಂದು ಮಗುವೂ ಸೇರಿ ದಂತೆ 30 ಮಂದಿಯನ್ನು ಸೇನೆಯ ಯೋಧರು ರಕ್ಷಣೆ  ಮಾಡಿದ್ದಾರೆ.

ತಂಗಧಾರ್‌-ಚೌಕಿಬಾಲ್‌ ಆಕ್ಸಿಸ್‌ ಬಳಿಯಲ್ಲಿ ಈ ಘಟನೆ ನಡೆದಿದೆ.

ವಾಹನದ ಮೇಲೆ ಹಿಮಗಳು ಬೀಳುವಷ್ಟರಲ್ಲಿ ವಾಹನದಲ್ಲಿದ್ದವರು ಕೆಳಕ್ಕೆ ಇಳಿದಿದ್ದಾರೆ.

ಅಲ್ಲಿಯೇ ಇದ್ದ ನಾಗರಿಕರನ್ನು ಯೋಧರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅವರ ವಾಹನವನ್ನೂ ಹಿಮದಿಂದ ಹೊರತೆಗೆಯಲಾಗಿದೆ.

0 تعليقات

إرسال تعليق

Post a Comment (0)

أحدث أقدم