ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 26 ರ ಯುವಕ ನೇಣು ಬಿಗಿದು ಆತ್ಮಹತ್ಯೆ ಗೆ ಶರಣು

26 ರ ಯುವಕ ನೇಣು ಬಿಗಿದು ಆತ್ಮಹತ್ಯೆ ಗೆ ಶರಣು

 


ಸುರತ್ಕಲ್: ಸಾಲ ಬಾಧೆಯಿಂದ ಬೇಸತ್ತು 26 ರ ಯುವಕ ಆಫೀಸ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಯಲ್ಲಿ ಸೋಮವಾರ ನಡೆದಿದೆ.

ಕಿನ್ನಿಗೋಳಿ (ಮುಲ್ಕಿ) ಯ ಪಕ್ಷಿಕೆರೆ ಎಸ್‌ಓ ಲೇಔಟ್ ನ ಸುಶಾಂತ್ (26) ಕೆಲಸ ಮಾಡುತ್ತಿರುವ ಆಫೀಸ್ ನಲ್ಲಿ ಟವೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಶಾಂತ್ ಪೋಷಕರು 15 ವರ್ಷಗಳ ಹಿಂದೆ ವಿಧಿವಶರಾಗಿದ್ದು, ಸಹೋದರ ಅಶ್ವಿತ್ (31) ಅವರನ್ನು ಅಗಲಿದ್ದಾರೆ. 

ಸಾಯುವ ಮೊದಲು ಕ್ಷಮೆಯಾಚಿಸಿ, ಸಾಲದ ಕಾರಣದಿಂದ ಈ ನಿರ್ಧಾರ ಮಾಡಿದ್ದೇನೆ. ತುಳು ಮೌಖಿಕ ಭಾಷೆ ಬಳಸಿ ಕನ್ನಡ ಭಾಷೆಯಲ್ಲಿ ಡೆತ್ ನೋಟ್ ಬರೆದಿಡಲಾಗಿದೆ.


0 Comments

Post a Comment

Post a Comment (0)

Previous Post Next Post