ಮಂಗಳೂರು: ಮಂಗಳೂರು ನಗರದ ಝಾರಾ ಚಾರಿಟೇಬಲ್ ಫೌಂಡೇಶನ್ ಹಮ್ಮಿಕೊಂಡಿರುವ 15 ಜೋಡಿಗಳ 'ಸೌಹಾರ್ದ ಸಾಮೂಹಿಕ ವಿವಾಹ' ಸಮಾರಂಭವು ಇಂದು ಬೆಳಿಗ್ಗೆ ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದ ಝಾರಾ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಲ್ಲಿಯವರೆಗೆ ಸಾಮೂಹಿಕ ವಿವಾಹ ನಡೆಯುತ್ತಿತ್ತು. ಆದರೆ ಇದೀಗ ಝಾರಾ ಚಾರಿಟೇಬಲ್ ಟ್ರಸ್ಟ್ ಒಂದು ನೂತನ ಕಾರ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ಧರ್ಮಸ್ಥಳ ಹೊರತುಪಡಿಸಿದರೆ ದ.ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯಲಿರುವ ಸಾಮೂಹಿಕ ವಿವಾಹ ಇದಾಗಿದೆ. 10 ಮುಸ್ಲಿಂ, 2 ಪರಿಶಿಷ್ಟ, 1 ಕೊರಗ, 1 ಕುರುಬ ಹಾಗೂ 1 ಬಿಲ್ಲವ ಜೋಡಿಯ ವಿವಾಹ ನೆರವೇರಲಿದೆ.
Post a Comment