ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರಿನಲ್ಲಿ ಸರ್ಕಾರಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪನೆ

ಮಂಗಳೂರಿನಲ್ಲಿ ಸರ್ಕಾರಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪನೆ

ಮಂಗಳೂರು: ಅವಧಿ ಪೂರ್ವ ಜನಿಸಿದ ಹಾಗೂ ತಾಯಿಯನ್ನು ಕಳೆದುಕೊಂಡ ಅನಾಥ ಶಿಶುವಿಗೆ ಎದೆ ಹಾಲು ನೀಡಲು ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಲು ಯೋಜನೆ ಮಾಡಲಾಗಿದೆ.

ಈ ಮೂಲಕ ರಾಜ್ಯದ ನಾಲ್ಕನೇ ಮಿಲ್ಕ್ ಬ್ಯಾಂಕ್ ಶೀಘ್ರವಾಗಿ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಇತ್ತೀಚೆಗೆ ತನ್ನ ಕಾರ್ಯವೈಖರಿ ಮೂಲಕ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ರೂಪುಗೊಂಡಿದೆ.‌ 

ಈ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಮಂಗಳೂರಿನ ರೋಟರಿ ಫೌಂಡೇಶನ್ ಗ್ಲೋಬಲ್ ಗ್ರ್ಯಾಂಟ್ ಪ್ರೊಜೆಕ್ಟ್ಸ್‌ನ  ಅಡಿಯಲ್ಲಿ 45 ಲಕ್ಷ ರೂ. ವಚ್ಚದಲ್ಲಿ ಮಿಲ್ಕ್ ಬ್ಯಾಂಕ್ ಯೋಜನೆ ಕಾರ್ಯಗತಗೊಳ್ಳುತ್ತಿದ್ದು 2022 ರ ಫೆಬ್ರವರಿಯಲ್ಲಿ ಆರಂಭವಾಗುವ ಸಾಧ್ಯತೆ ಇದೆ.  

ಬೆಂಗಳೂರಿನ ಅಮರ ಮಿಲ್ಕ್ ಬ್ಯಾಂಕ್ ನ ಡಾ.ಶ್ರೀನಾಥ್ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಇದು ಸಂಪೂರ್ಣ ಉಚಿತ ಸೇವೆಯಾಗಿದ್ದು ಅನಾಥ ಶಿಶುಗಳಿಗೆ ಇದರಿಂದ ಮಹತ್ತರ ಪ್ರಯೋಜನ ಸಿಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಅಧೀಕ್ಷಕ ದುರ್ಗಾಪ್ರಸಾದ್ ಎಂ. ಆರ್ ತಿಳಿಸಿದ್ದಾರೆ.

0 Comments

Post a Comment

Post a Comment (0)

Previous Post Next Post