ಹೊನ್ನಾವರ: ಶರಾವತಿ ತೀರದ ಪುಣ್ಯಭೂಮಿ ತಪೋಭೂಮಿ, ಹವ್ಯಕ ಪುರಾಧೀಶ್ವರಿಯಾದ ಹೈಗುಂದ ಕ್ಷೇತ್ರದ ಜಗನ್ಮಾತೆ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ 12.12.2021 ಭಾನುವಾರ ಚಂಡಿಕಾಹವನ ಮತ್ತು ಶ್ರೀ ಸೂಕ್ತ ಹವನ ನಡೆಯಿತು.
ಶ್ರೀ ಕ್ಷೇತ್ರದ ದಿವ್ಯ ಸಾನ್ನಿಧ್ಯ ಉಜ್ವಲವಾಗಿ ಬೆಳಗಿ ಭಕ್ತವೃಂದದ ಸಕಲ ಅಭ್ಯುದಯಕ್ಕಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವಕೀಲರಾದ ಎಸ್.ಎಂ.ಭಟ್ ಮತ್ತು ಮಿತ್ರವೃಂದದ ಭಕ್ತರು ಆಗಮಿಸಿ ಮಹಾದೇವಿಯ ಸನ್ನಿಧಿಯಲ್ಲಿ ಸೇವೆ ಮಾಡಿದರು.
ಪ್ರಾತಃಕಾಲ ಉದಕಶಾಂತಿಯ ಪವಿತ್ರವಾದ ಮಂತ್ರಗಳಿಂದ ಪಾವನವಾದ ಕಲಶ ಅಭಿಷೇಕವಾದ ಅನಂತರ ವಿಘ್ನನಾಶಕನಾದ ಮಹಾಗಣಪತಿಗೆ ಗಣಪತಿ ಹವನ, ಸಕಲ ಇಷ್ಟಾರ್ಥ ಸಿದ್ಧಿಗಾಗಿ ಗಣಪತಿ ಅಥರ್ವ ಶೀರ್ಷ ಹವನ, ಶ್ರೀ ಸೂಕ್ತ ಹವನ, ಚಂಡಿಕಾಹವನ, ಮಹಾದೇವಿಗೆ ಮಂಗಳಾರತಿಯ ಅನಂತರ ವಿಶೇಷವಾದ ರಾಜೋಪಚಾರ ಸೇವೆ ಅಷ್ಟಾವಧಾನ ಸೇವೆ ನಡೆಯಿತು.
ಚಂಡಿಕಾ ಹವನವನ್ನು ಪರಕಜೆ ಅನಂತನಾರಾಯಣ ಭಟ್ ಮತ್ತು ಶ್ರೀ ಸೂಕ್ತ ಹವನವನ್ನು ಮಿತ್ತೂರು ಶ್ರೀ ನಿವಾಸ ಭಟ್ ಮತ್ತು ವೈದಿಕ ವೃಂದದವರು ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೇಶವ ಹೆಗಡೆಯವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment