ಬೆಂಗಳೂರು: ನಟ ಶೈನ್ ಶೆಟ್ಟಿ ಅಭಿನಯದ ಥ್ಯಾಂಕ್ ಯೂ ಕಿರುಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಈ ಚಿತ್ರವು ಇದೇ ಬರುವ 17 ನೇ ತಾರೀಕಿನಂದು ಬಿಡುಗಡೆಯಾಗಲಿದೆ.
ಈ ಕಿರುಚಿತ್ರವು ಡಿಸೆಂಬರ್ 17 ರಂದು ಸಂಜೆ 6 ಗಂಟೆಗೆ PRK ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಪ್ರಸಾದ್ ಕಂಠೀರವ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹರ್ಷಿತ್ ಪ್ರಕಾಶ್ ಮತ್ತು ನವೀನ್ ಎನ್.ಕೆ ಬಂಡವಾಳ ಹೂಡಿದ್ದಾರೆ.
PRK ಬ್ಯಾನರ್ ಅಡಿಯಲ್ಲಿ ಚಿತ್ರವು ಬಿಡುಗಡೆಯಾಗುತ್ತಿದ್ದು ಖ್ಯಾತ ಗಾಯಕ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೈನ್ ಶೆಟ್ಟಿ ಅಭಿಮಾನಿಗಳು ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
Post a Comment