ಉತ್ತರಾಖಂಡ: ಬಚ್ ಪನ್ ಕಾ ಪ್ಯಾರ್ ಹಾಡಿನ ಮೂಲಕ ಫೇಮಸ್ ಆಗಿದ್ದ 10 ವರ್ಷದ ಬಾಲಕ ಸಹದೇವ್ ಡಿರ್ಡೊ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂದೆಯ ಜೊತೆ ಹೆಲ್ಮೆಟ್ ಧರಿಸದೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತವಾಗಿ ಸಹದೇವ್ ಕೆಳಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹದೇವ್ ಈ ಹಿಂದೆ ಶಾಲೆಯಲ್ಲಿ ' ಬಚ್ಪನ್ ಕಾ ಪ್ಯಾರ್' ಹಾಡು ಹಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿತ್ತು. ಸಿನಿಮಾದಲ್ಲಿ ಹಾಡಲು ಕೂಡ ಬಾಲಕನಿಗೆ ಅವಕಾಶ ಸಿಕ್ಕಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
إرسال تعليق