ಮಂಗಳೂರು: ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ನಿವಾಸಕ್ಕೆ ಹಿಂದಿ ಚಿತ್ರರಂಗದ ಸಾಹಸ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟಿ ಭೇಟಿ ನೀಡಿದರು. ಇತ್ತೀಚೆಗೆ ತೆರೆಕಂಡ ತಮ್ಮ ನಿರ್ಮಾಣದ 'ಏರೆಗಾವುಯೇ ಕಿರಿಕಿರಿ' ತುಳು ಚಲನಚಿತ್ರದ ಬಿಡುಗಡೆಗಾಗಿ ಮುಂಬೈಯಿಂದ ನಗರಕ್ಕಾಗಮಿಸಿದ ಅವರು ಹಾಜಬ್ಬರನ್ನು ಅಭಿನಂದಿಸಿ ಶುಭಹಾರೈಸಿದರು.
ಹಿರಿಯ ಸಮಾಜ ಸೇವಕ ಹಾಗೂ ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರ ಜೊತೆಗಿದ್ದರು. ಇದೇ ಸಂದರ್ಭದಲ್ಲಿ ಊರಿನ ಬಡಮಕ್ಕಳಿಗಾಗಿ ಶಿಕ್ಷಣ ಪ್ರೇಮಿ ಹಾಜಬ್ಬರಿಂದ ನಿರ್ಮಿಸಲ್ಪಟ್ಟ ಹರೇಕಳ ನ್ಯೂಪಡ್ಪು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗಣ್ಯರು ಭೇಟಿಯಿತ್ತು ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق