ಬದಿಯಡ್ಕ: ಭಾರತೀಯ ಜನತಾ ಪಕ್ಷ ಬದಿಯಡ್ಕ ಪಂಚಾಯಿತಿ ಸಮಿತಿ ನೀರ್ಚಾಲು ಇದರ ಆಶ್ರಯದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆಯ ಪ್ರಯುಕ್ತ ಚುಕ್ಕಿನಡ್ಕದಲ್ಲಿ ಇ ಶ್ರಮ್ ಉಚಿತ ನೊಂದಾವಣಾ ಶಿಬಿರ ಜರಗಿತು. ರಾಜ್ಯ ಸಮಿತಿ ಸದಸ್ಯ ಪಟ್ಟಾಜೆ ವಾರ್ಡು ಜನಪ್ರತಿನಿಧಿ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಬಿಜೆಪಿ ಪಂಚಾಯಿತಿ ಸಮಿತಿ (ನೀರ್ಚಾಲು ಪಶ್ಚಿಮ) ಅಧ್ಯಕ್ಷೆ, ಬ್ಲೋಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ನೀರ್ಚಾಲು ಅಧ್ಯಕ್ಷತೆ ವಹಿಸಿದ್ದರು. ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಕುಞ್ಞಿಕಣ್ಣ ಮಣಿಯಾಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕೇರಳ ಗ್ರಾಮೀಣ ಬ್ಯಾಂಕ್ ಹಾಗೂ ನಬಾರ್ಡ್ ಇದರ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರಾದ ಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕೇಂದ್ರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ಮಂಡಲ ಕೋಶಾಧಿಕಾರಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಪ್ರಕಾಶ್ ಕಾರ್ಮಾರು ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment