ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮತಾಂತರ ನಿಷೇಧ ಕಾಯಿದೆ ಪಕ್ಷಾಂತರ ನಿಷೇಧದಂತಾಗಬಾರದು

ಮತಾಂತರ ನಿಷೇಧ ಕಾಯಿದೆ ಪಕ್ಷಾಂತರ ನಿಷೇಧದಂತಾಗಬಾರದು


ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಿರುವ ಬಹು ಚರ್ಚಿತ ಹಾಗೂ ಕಾನೂನಾತ್ಮಕ ಮಸೂದೆ ಅಂದರೆ ಮತಾಂತರ ನಿಷೇಧ ಕಾಯಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಮತಾಂತರ ಮಸೂದೆಯನ್ನು ಶಾಸನ ಸಭೆಯಲ್ಲಿ ಮಂಡಿಸಿ ಈಗಾಗಲೇ ಅನುಮೋದನೆಯನ್ನೂ ಪಡೆದಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಈ ನಿಧಾ೯ರ ಕಾನೂನಾತ್ಮಕವಾಗಿ ಎಷ್ಟು ಸರಿ ಅನ್ನುವುದನ್ನು ಕೂಡಾ ವಿಮರ್ಶಿಸುವುದರ ಜೊತೆಗೆ ಮತ ಅರ್ಥಾತ್ ಧರ್ಮಗಳ ಅಸ್ತಿತ್ವದ ದೃಷ್ಟಿಯಿಂದಲೂ ಚಿಂತನೆ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಒಂದಂತೂ ಸತ್ಯ ಈ ಮತಾಂತರ ನಿಷೇಧ ಕಾಯಿದೆ ಪಕ್ಷಾಂತರ ಕಾಯಿದೆಯ ಇನ್ನೊಂದು ಮುಖವಾಗದಿರಲಿ ಅನ್ನುವುದು ನಮ್ಮೆಲ್ಲರ ಆಶಯವೂ ಹೌದು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಹಾಗಾದರೆ ಈ ಮತಾಂತರ ನಿಷೇಧ ಕಾಯಿದೆ ಸಂವಿಧಾನ ಆಶಯಕ್ಕೆ ಪೂರಕವಾಗಿದೆಯಾ? ಅನ್ನುವ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುವ ಮೊದಲ ಪ್ರಶ್ನೆ. ಅದಕ್ಕೆ ಪ್ರಮುಖ ಕಾರಣ. 1. ಈಗಾಗಲೇ ನಮ್ಮ ಸಂವಿಧಾನದ ಭಾಗ lll ಅನುಚ್ಛೇದ 25 ರಿಂದ 28ರವರೆಗೆ ವಿವರಿಸುವ ಮೂಲಭೂತವಾದ ಧಾರ್ಮಿಕ ಹಕ್ಕುಗಳ ಅಡಿಯಲ್ಲಿ ಸ್ವಷ್ಟವಾಗಿ ಹೇಳಿ ಬಿಟ್ಟಿದೆ. ಧಮ೯ ಮತ ಜಾತಿ ಇವೆಲ್ಲವೂ ವೆೈಯಕ್ತಿಕವಾದ ಹಕ್ಕುಗಳು (individual right) ಹೊರತು ಸಮಷ್ಟಿ  ಹಕ್ಕುಗಳಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಜಾತಿ ಧರ್ಮ ದೇವರನ್ನು ಭಜಿಸುವ ಪೂಜಿಸುವ ಒಪ್ಪಿ ನಡೆಯುವ ಅವಕಾಶವಿದೆ. ಆದರೆ ಇಲ್ಲಿ ಯಾವುದೇ ತರದ ಒತ್ತಡ ಒತ್ತಾಯವಿರಬಾರದು. ಆಮಿಷ ತೇೂರಿಸಿ ಯಾರನ್ನು ಯಾವುದೇ ಮತದಿಂದಾಗಲಿ ಧರ್ಮದಿಂದಾಗಲಿ ಸೆಳೆಯುವುದು ಸಲ್ಲದು ಅನ್ನುವ ಎಚ್ಚರಿಕೆಯನ್ನು ಕೂಡಾ ಸ್ವಷ್ಟವಾಗಿ ಉಚ್ಚರಿಸಿದೆ.


2. ಅಂದರೆ ಸಂವಿಧಾನದಲ್ಲಿ ಮತ ಧಮ೯ಗಳ ವಿಚಾರದಲ್ಲಿ ಇಷ್ಟು ಸ್ವಷ್ಟವಾಗಿ ಹೇಳಿರುವಾಗ ಮತ್ತೊಮ್ಮೆ ಸರಕಾರವೇ ಕಾಯಿದೆ ತಂದು ಅದನ್ನು ನಿಷೇಧ ಮಾಡುವುದು ಸರಿಯೇ? ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗುವುದಿಲ್ಲವೇ? ಅನ್ನುವ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ ತಾನೆ?

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


3. ಬಲತ್ಕಾರವಾದ ಆಮಿಷ ತೇೂರಿಸಿ ಮತಾಂತರ ಮಾಡಿದ ಪ್ರಸಂಗಳಿದ್ದರೆ ಅದನ್ನು ಇದಾಗಲೇ ಚಾಲ್ತಿಯಲ್ಲಿರುವ ಕಾನೂನಿನ ಮೂಲಕ ಶಿಕ್ಷೆಗೆ ಒಳಪಡಿಸಬಹುದಿತ್ತು ಅಲ್ಲವೇ? ಅಂದರೆ ಇದ್ದ ಕಾಯಿದೆಯ ಅನುಷ್ಠಾನದಲ್ಲಿ ನಾವೇ ಸೇೂತಿದ್ದೇವೆ. ಹಾಗಾಗಿ ಹೊಸ ಕಾನೂನು ಹುಡುಕುವ ತವಕದಲ್ಲಿ ನಾವಿದ್ದೇವೆ ಅನ್ನುವುದು ಅಷ್ಟೇ ಸತ್ಯ. ಅಂದರೆ ಬರೇ ಕಾನೂನು ತರುವುದರಿಂದ ಸಮಸ್ಯೆ ದೂರ ಮಾಡಲು ಸಾಧ್ಯವಿಲ್ಲ ಅನ್ನುವುದು ನಮ್ಮ ಹಿಂದಿನ ಪಕ್ಷಾಂತರ ನಿಷೇಧ ಕಾಯಿದೆಯಲ್ಲಿಯೇ ಅನುಭವಕ್ಕೆ ಬಂದಿದೆ. ಹಾಗಾಗಿ ಮತಾಂತರ ನಿಷೇಧ ಕಾಯಿದೆ ಪಕ್ಷಾಂತರ ಕಾಯದೆಯ ಇನ್ನೊಂದು ಮುಖವಾಗುವುದರಲಿ ಯಾವುದೇ ಸಂಶಯವಿಲ್ಲ ಅನ್ನುವುದು ಮೇಲ್ನೋಟಕ್ಕೆ ಸ್ವಷ್ಟವಾಗಿ ಗೇೂಚರಿಸುತ್ತಿದೆ.


4. ಮತಾಂತರ ಯಾಕೆ ಆಗುತ್ತಿದ್ದಾರೆ ಅನ್ನುವ ಕುರಿತಾಗಿ ಆಳವಾದ ಅಧ್ಯಯನ ಮೊದಲು ಆಗಬೇಕು ಮಾತ್ರವಲ್ಲ ತಮ್ಮ ಸಮಾಜದಲ್ಲಿನ ನ್ಯೂನತೆಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕು. ಪ್ರತಿ ಧರ್ಮ/ಮತಗಳ ಮುಖಂಡರು ಆತ್ಮ ವಿಮರ್ಶೆ ಮಾಡಿಕೊಳ್ಳುವುದರ ಜೊತೆಗೆ ಪರಿಹಾರವನ್ಮು ಹುಡುಕಿಕೊಳ್ಳುವಲ್ಲಿ ಮುಂದಾಗಬೇಕು. ಈ ಮೂಲಕ ಪ್ರತಿ ಮತ/ ಧರ್ಮಗಳು ತಮ್ಮ ತಮ್ಮ ಆಸ್ಮಿತೆ ಕಾಪಾಡಿಕೊಳ್ಳುವಲ್ಲಿ ಕಾರ್ಯಶೀಲರಾಗಬೇಕು. ಹೊರತು ಯಾವುದೇ ಕಾನೂನು ಕಾಯಿದೆ ತಂದು ಜನರ ಭಾವನೆಗಳನ್ನು ಮನಸ್ಸುಗಳನ್ನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಟ್ಟಿ ಹಾಕಲು ಸಾದ್ಯವಿಲ್ಲ ಅನ್ನುವುದು ಅಷ್ಟೇ ನಿಜ.


-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post