ಬೆಂಗಳೂರು: ಅಜೇಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ " ಲವ್ ಯೂ ರಚ್ಚು" ಚಿತ್ರದ ಪ್ರಮೋಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಈ ಸಿನಿಮಾದ ಹಾಡುಗಳು ಕೇಳುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈಗಾಗಲೇ ಲವ್ ಯೂ ರಚ್ಚು ಸಿನಿಮಾದ ಫಸ್ಟ್ ಲುಕ್ ನೋಡಿ ಮೆಚ್ಚಿಕೊಂಡಿರುವ ನಟ ಧ್ರುವ ಸರ್ಜಾ ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ.
ಗುರು ದೇಶಪಾಂಡೆ ನಿರ್ಮಿಸುತ್ತಿರುವ , ಶಂಕರ್ ಎಸ್ ರಾಜ್ ನಿರ್ದೇಶನದ ಲವ್ ಯೂ ರಚ್ಚು ಸಿನಿಮಾಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಿದೆ. ಚಿತ್ರಕಥೆ, ಸಂಭಾಷಣೆ ಹೊಣೆಯನ್ನು ಶಶಾಂಕ್ ನಿರ್ವಹಿಸಲಿದ್ದಾರೆ.
ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ಮಾಪಕ ಗುರು ದೇಶಪಾಂಡೆ " ಲವ್ ಯೂ ರಚ್ಚು" ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಹಾಡಿಗೆ ಅಭಿಮಾನಿಗಳ ಕಡೆಯಿಂದ ಒಳ್ಳೆ ರೀತಿಯ ಪ್ರತಿಕ್ರಿಯೆ ಬಂದಿದ್ದು ಅವರ ಬೆಂಬಲ ನೋಡುವಾಗ ಖುಷಿಯಾಗುತ್ತದೆ. ಈ ಸಿನಿಮಾ ಡಿಸೆಂಬರ್ 31 ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
إرسال تعليق