ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೂಲಿ ಕಾರ್ಮಿಕನ ಸಾವಿನ ವಿಚಾರ ತಿಳಿಸಲು ಹೋದ ಮಾಲೀಕನು ಹೃದಯಾಘಾತದಿಂದ ಸಾವು

ಕೂಲಿ ಕಾರ್ಮಿಕನ ಸಾವಿನ ವಿಚಾರ ತಿಳಿಸಲು ಹೋದ ಮಾಲೀಕನು ಹೃದಯಾಘಾತದಿಂದ ಸಾವು



 ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಆಕಸ್ಮಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ ವಿಚಾರವನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರಗ ಗೇಟ್ ಸಮೀಪ ನಡೆದಿದೆ.

ಕೂಲಿ ಕಾರ್ಮಿಕ ಬರ್ಮಪ್ಪ (55) ಅವರು ನಿವೃತ್ತ ಶಿಕ್ಷಕರಾದ ದುಗ್ಗಪ್ಪಗೌಡ (75) ಎಂಬುವರ ತೋಟದಲ್ಲಿ ಕೆಲಸ ಮಾಡಲು ಬಂದಿದ್ದರು.

ಅನೇಕ ವರ್ಷಗಳಿಂದ ಅವರ ಮನೆಯಲ್ಲಿ ಕೆಲಸ ಕೂಡ ಮಾಡುತ್ತಿದ್ದ ಕಾರ್ಮಿಕ ಮಧ್ಯಾಹ್ನದ ವರೆಗೆ ಖುಷಿಯಿಂದ ತೋಟದಲ್ಲಿ ಕೆಲಸ ಮಾಡಿ ಬಂದ ಬರ್ಮಾ ನಂತರ ಸಂಜೆ ಬಂದು ಊಟ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ಅವನಿಗೆ ಹೃದಯಾಘಾತವಾಗಿ ಸಾವಿಗೀಡಾದ, ಈ ವಿಷಯ ತಿಳಿದ ತಕ್ಷಣ ದುಗ್ಗಪ್ಪಗೌಡ ಕುಟುಂಬದವರು ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬರ್ಮಾ ಸಾವನ್ನಪ್ಪಿದ್ದ.


ಸಾವಿನ ಸುದ್ದಿಯನ್ನು ಮನೆಯವರಿಗೆ ತಿಳಿಸಲು ದುಗ್ಗಪ್ಪಗೌಡ ತೆರಳಿದರೆ ದಾರಿ ಮಧ್ಯೆ ಅವರಿಗೂ ಹೃದಯಾಘಾತವಾಗಿದೆ.

ತಕ್ಷಣ ಅವರನ್ನು ಅಕ್ಕ ಪಕ್ಕದ ಗ್ರಾಮಸ್ಥರ ನೆರವಿನಿಂದ ಆಸ್ಪತ್ರೆ ತೆಗೆದು ಕೊಂಡು ಹೋಗುವ ಸಮಯದಲ್ಲಿ ಮಾರ್ಗಮಧ್ಯೆ ಅವರು ಸಾವನ್ನಪ್ಪಿದರು.


0 تعليقات

إرسال تعليق

Post a Comment (0)

أحدث أقدم